ಗುರುವಾರ , ಅಕ್ಟೋಬರ್ 6, 2022
26 °C

WhatsApp- ಇನ್ಮುಂದೆ ಸ್ಕ್ರೀನ್‌ಶಾಟ್‌ಗೆ ಅವಕಾಶವಿಲ್ಲ: ಹೊಸ ಫೀಚರ್‌ಗಳು ಏನೇನು?

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಜನಪ್ರಿಯ ಮೆಸೆಂಜರ್ ವಾಟ್ಸ್‌ಆ್ಯಪ್ ಬಳಕೆದಾರ ಸ್ನೇಹಿ ಫೀಚರ್‌ಗಳನ್ನು ನೀಡುವುದರಲ್ಲಿ ಸದಾ ಮುಂದು.

ಇದೀಗ ಖಾಸಗಿತನಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಹೊಸ ಫೀಚರ್‌ಗಳನ್ನು ವಾಟ್ಸ್‌ಆ್ಯಪ್ ಮಾತೃಸಂಸ್ಥೆಯಾದ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್‌ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇಂತಹ ಫೀಚರ್‌ಗಳು ಬರಲಿವೆ ಎಂದು ಕೆಲ ಟೆಕ್ ಆಧಾರಿತ ವೆಬ್‌ಸೈಟ್‌ಗಳಲ್ಲಿ ಈ ಮೊದಲು ಸುದ್ದಿಗಳು ಹರಿದಾಡಿದ್ದವು.

ಪ್ರಮುಖವಾಗಿ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶಗಳನ್ನು ಹಾಗೂ ಸ್ಟೇಟಸ್‌ಗಳನ್ನು ಇನ್ಮುಂದೆ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳದಂತೆ ನಿರ್ಬಂಧಿಸಲು ಬಳಕೆದಾರನಿಗೆ ಅವಕಾಶ ನೀಡಲಾಗುತ್ತದೆ. ‘View Once’ ಸಂದೇಶದಲ್ಲೂ ಕೂಡ ಇದು ಕೆಲಸ ಮಾಡಲಿದೆ.

ಗ್ರೂಪ್‌ಗಳಲ್ಲಿ ಹೊರಹೋಗುವವರು ಗ್ರೂಪ್‌ನ ಇತರೆ ಸದಸ್ಯರಿಗೆ ಗೊತ್ತಾಗದಂತೆ ನಿರ್ಗಮಿಸಲು ವಾಟ್ಸ್‌ಆ್ಯಪ್‌ನಲ್ಲಿ ಇನ್ಮುಂದೆ ಅವಕಾಶ ಸಿಗಲಿದೆ. ಅಡ್ಮಿನ್‌ಗೆ ಮಾತ್ರ ಹೊರಹೋಗುವವರ ಬಗ್ಗೆ ಗೊತ್ತಾಗುತ್ತದೆ.

ವಾಟ್ಸ್‌ಆ್ಯಪ್‌ನಲ್ಲಿ ಆನ್‌ಲೈನ್‌ ಇರುವವರು ತಾವು ಆನ್‌ಲೈನ್‌ ಇದ್ದೇವೆ ಎಂಬುದನ್ನು ಯಾರಿಗೆ ಮಾತ್ರ ತಿಳಿಸಬೇಕು ಎನ್ನುವ ಫೀಚರ್‌ ನೀಡಲಾಗಿದೆ.

ಈ ಮೂರು ಪ್ರಮುಖು ಫೀಚರ್‌ಗಳು ಶೀಘ್ರದಲ್ಲೇ ಎಲ್ಲ ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಲಭ್ಯವಾಗಲಿವೆ ಎಂದು ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ.

ಅಲ್ಲದೇ ಪ್ರಸ್ತುತ ಅಪ್ಡೇಟ್‌ನಲ್ಲಿ, ಡಾಕ್ಯುಮೆಂಟ್ ವಿಭಾಗದಲ್ಲಿ ಫೈಲ್ ಕಳಿಸುವ ಸಾಮರ್ಥ್ಯವನ್ನು 2ಜಿಬಿಗೆ ಹೆಚ್ಚಿಸಲಾಗಿದೆ. 

ಗ್ರೂಪ್‌ ಸದಸ್ಯರ ಗರಿಷ್ಠ ಸಂಖ್ಯೆಯನ್ನು 512 ಕ್ಕೆ ಹೆಚ್ಚಿಸಲಾಗಿದೆ. ವಿಡಿಯೊ ಕಾಲ್‌ನಲ್ಲಿ ಬೇರೆಯವರು ಮಾತನಾಡುವುದನ್ನು, ಸಂದೇಶ ಕಳಿಸುವುದನ್ನು ಮ್ಯೂಟ್ ಮಾಡಬಹುದಾಗಿದೆ. ಈ ಅಪ್ಡೇಟ್‌ಗಳು ಬೀಟಾ ವರ್ಷನ್‌ ಅವರಿಗೆ ಮಾತ್ರ ಲಭ್ಯವಿದ್ದು, ಕೆಲವೇ ವಾರಗಳಲ್ಲಿ ಎಲ್ಲ ಬಳಕೆದಾರರಿಗೆ ಸಿಗಲಿವೆ ಎಂದು ಮಾರ್ಕ್‌ ತಿಳಿಸಿದ್ದಾರೆ.

‘ಇಂಟರ್‌ಲಾಕಿಂಗ್ ಲೇಯರ್ ರಕ್ಷಣೆಯನ್ನು ವಾಟ್ಸ್‌ಆ್ಯಪ್‌ಗೆ ಒದಗಿಸಲಾಗುತ್ತಿದ್ದು, ಈಗಿನ ಫೀಚರ್‌ಗಳ ಜೊತೆ ಅದು ಕೂಡ ಬಳಕೆದಾರರ ಸಂದೇಶಗಳ ಗೋಪ್ಯತೆಯನ್ನು ಕಾಯಲು ಅತ್ಯಂತ ಉನ್ನತಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ’ ಎಂದು ವಾಟ್ಸ್‌ಆ್ಯಪ್‌ ಪ್ರೊಡಕ್ಟ್ ಹೆಡ್ ಆಮಿ ವೊರಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು