ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೋಬಿಝ್‌: ಉದ್ದಿಮೆಗಳ ನೆರವಿಗೆ ‘ಮೈಬಿಲ್‌ಬುಕ್‌‘

Last Updated 24 ಏಪ್ರಿಲ್ 2021, 6:17 IST
ಅಕ್ಷರ ಗಾತ್ರ

ಬೆಂಗಳೂರು: ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (ಎಸ್‍ಎಂಬಿ) ತಂತ್ರಜ್ಞಾನ ಕಂಪನಿಯಾಗಿರುವ ಬೆಂಗಳೂರು ಮೂಲದ ಫ್ಲೋಬಿಝ್, ‘ಎಸ್ಎಂಬಿ‘ಗಳ ವ್ಯವಹಾರಗಳ ಬಿಲ್ಲಿಂಗ್ ಮತ್ತು ಲೆಕ್ಕಪತ್ರ ನಿರ್ವಹಿಸಲು ನೆರವಾಗುವ ಸರಳವಾದ ‘ಮೈಬಿಲ್‍ಬುಕ್‘ (myBillBook) ಅಪ್ಲಿಕೇಷನ್‌ ಪರಿಚಯಿಸಿದೆ.

ಇದು ಮೊಬೈಲ್ ಮತ್ತು ಡೆಸ್ಕ್‌ಟಾಪ್ ಬಳಕೆಗೆ ಲಭ್ಯ ಇರಲಿದೆ. ಬಿಲ್‌, ಲೆಕ್ಕಪತ್ರ ವ್ಯವಹಾರಗಳನ್ನು ನಿರ್ವಹಿಸಲು ಉದ್ಯಮಗಳ ಮಾಲೀಕರಿಗೆ ಇದು ಸುಲಭ ಮತ್ತು ಸುರಕ್ಷಿತ ಅನುಭವ ಒದಗಿಸಲಿದೆ. ಕೆಲವೇ ನಿಮಿಷಗಳಲ್ಲಿ ವಹಿವಾಟಿನ ವಿವರಗಳನ್ನು ಡಿಜಿಟಲೀಕರಣಗೊಳಿಸುತ್ತದೆ.

ಸದ್ಯಕ್ಕೆ ಇಂಗ್ಲಿಷ್, ಹಿಂದಿ, ಗುಜರಾತಿ ಮತ್ತು ತಮಿಳು ಭಾಷೆಗಳಲ್ಲಿ ಲಭ್ಯ ಇದೆ. ಶೀಘ್ರದಲ್ಲೇ ಕನ್ನಡದಲ್ಲಿಯೂ ಬಿಡುಗಡೆಯಾಗಲಿದೆ.

ಜಿಎಸ್‍ಟಿ ಮತ್ತು ಜಿಎಸ್‍ಟಿ ವ್ಯಾಪ್ತಿಗೆ ಒಳಪಡದ ವ್ಯವಹಾರಗಳಿಗೆ ಬಿಲ್‍ಗಳನ್ನು ಸೃಷ್ಟಿಸುವುದು, ಖರೀದಿ ಮತ್ತು ಖರ್ಚಿನ ವಿವರ ದಾಖಲಿಸುವುದು, ಸರಕುಗಳ ದಾಸ್ತಾನು ನಿರ್ವಹಣೆ ಮತ್ತು ಪಾವತಿಗಳು / ಸ್ವೀಕೃತಿಗಳನ್ನು ಮೊಬೈಲ್ ಫೋನ್ ಅಥವಾ ಕಂಪ್ಯೂಟರ್‌ಗಳಿಂದ ನೇರವಾಗಿ ನಿರ್ವಹಿಸಲು ಮೈಬಿಲ್‍ಬುಕ್ ನೆರವಾಗಲಿದೆ. ಲಾಭ ಮತ್ತು ನಷ್ಟದ ವಿವರಗಳು, ಮಾರಾಟ ಮಾಹಿತಿ, ‌ಜಿಎಸ್‍ಟಿಆರ್ ವರದಿ ಸೇರಿದಂತೆ ವಾಣಿಜ್ಯ ವಹಿವಾಟಿನ ವರದಿಗಳನ್ನು ಸಹ ಈ ಬಿಸಿನೆಸ್ ಅಪ್ಲಿಕೇಷನ್ ಸಿದ್ಧಪಡಿಸುತ್ತದೆ. ಮೈಬಿಲ್‍ಬುಕ್ ಸಹಾಯದಿಂದ ಮೊಬೈಲ್ ಮತ್ತು ಡೆಸ್ಕ್‌ಟಾಪ್‍ಗಳ ನಡುವೆ ಡೇಟಾ ವರ್ಗಾವಣೆಯನ್ನು ಸಹ ಮಾಡಬಹುದು.

‘ಎಸ್‍ಎಂಬಿಗಳ ವಹಿವಾಟಿನ ಬೆಳವಣಿಗೆಯನ್ನು ಚುರುಕುಗೊಳಿಸುವ ಏಕೈಕ ಗುರಿಯೊಂದಿಗೆ ಮೈಬಿಲ್‍ಬುಕ್ ರೂಪಿಸಲಾಗಿದೆ‘ ಎಂದು ಫ್ಲೋಬಿಝ್‍ನ ಸಂಸ್ಥಾಪಕ ಮತ್ತು ಸಿಇಒ ರಾಹುಲ್ ರಾಜ್ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT