ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬಾರ್‌ಕೋಡ್‌ ಸ್ಕ್ಯಾನರ್‌' ತೆಗೆದುಹಾಕಿದ ಗೂಗಲ್‌

Last Updated 9 ಫೆಬ್ರುವರಿ 2021, 16:47 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗಷ್ಟೇ 'ದಿ ಗ್ರೇಟ್‌ ಸಸ್ಪೆಂಡರ್‌' ಬ್ರೌಸರ್‌ ಎಕ್ಸ್‌ಟೆನ್ಷನ್‌ ಟೂಲ್‌ನ್ನು ಗೂಗಲ್‌ ತನ್ನ ಕ್ರೋಮ್‌ ವೆಬ್‌ಸ್ಟೋರ್‌ನಿಂದ ತೆಗೆದು ಹಾಕಿತ್ತು. ಇದೀಗ 'ಬಾರ್‌ಕೋಡ್‌ ಸ್ಕ್ಯಾನರ್‌' ಅಪ್ಲಿಕೇಷನ್‌ನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ.

ಬಾರ್‌ಕೋಡ್‌ ಸ್ಕ್ಯಾನರ್‌ ಆ್ಯಪ್‌ ಇರುವ ಫೋನ್‌ಗಳಲ್ಲಿ ಬ್ರೌಸರ್‌ ತೆರೆದರೆ, ಪಾಪ್‌–ಅಪ್‌ ಜಾಹೀರಾತುಗಳ ಮೂಲಕ ಅನಧಿಕೃತವಾಗಿ ಥರ್ಡ್‌ ಪಾರ್ಟಿ ಸೈಟ್‌ಗಳಿಗೆ ದಿಕ್ಕು ಬದಲಿಸುತ್ತಿದ್ದು, ಜಾಹೀರಾತು ಕ್ಲಿಕ್‌ಗಳಿಂದ ಆದಾಯ ಗಳಿಸುವ ಪ್ರಯತ್ನ ಮಾಡಿರುವುದನ್ನು ಗಮನಿಸಲಾಗಿದೆ.

ಮಾಲ್ವೇರ್‌ಬೈಟ್ಸ್‌ನ ಸೈಬರ್‌ ಸಂಶೋಧಕ ನಥಾನ್‌ ಕಾಲಿಯರ್‌, ಬಾರ್‌ಕೋಡ್‌ ಸ್ಕ್ಯಾನರ್‌ ಜಾಹೀರಾತು ಕುತಂತ್ರಾಂಶ ಎಸ್‌ಡಿಕೆ (ಸಾಫ್ಟ್‌ವೇರ್‌ ಡೆವಲೆಪ್ಮೆಂಟ್‌ ಕಿಟ್‌) –"Android/Trojan.HiddenAds.AdQR" ಒಳಗೊಂಡಿರುವುದನ್ನು ಬಹಿರಂಗ ಪಡಿಸಿದ್ದಾರೆ. ಲಾವಾಬರ್ಡ್‌ ಲಿಮಿಟೆಡ್‌ ಈ ಸ್ಕ್ಯಾನರ್‌ ಆ್ಯಪ್‌ ಅಭಿವೃದ್ಧಿ ಪಡಿಸಿದೆ.

ಜಗತ್ತಿನಾದ್ಯಂತ ಸುಮಾರು 1 ಕೋಟಿ ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಬಾರ್‌ಕೋಡ್‌ ಸ್ಕ್ಯಾನರ್‌ ಆ್ಯಪ್‌ ಇನ್‌ಸ್ಟಾಲ್‌ ಆಗಿರುವುದಾಗಿ ತಿಳಿದು ಬಂದಿದೆ. ಈಗ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್‌ ಲಭ್ಯವಿಲ್ಲ, ಆದರೆ ಅದಾಗಲೇ ಇನ್‌ಸ್ಟಾಲ್‌ ಮಾಡಿಕೊಂಡಿರುವ ಬಳಕೆದಾರರು ಕೂಡಲೇ ಆ್ಯಪ್‌ ತೆಗೆದುಹಾಕುವಂತೆ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT