ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ಬಳಕೆದಾರರ ಮಾಹಿತಿ ಕದಿಯುವ ಮಾಲ್ವೇರ್: ವರದಿ ಬಹಿರಂಗ

ಜಿಮೇಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಔಟ್‌ಲುಕ್ ಬಳಕೆದಾರರ ಮಾಹಿತಿ ಕದಿಯುತ್ತಿದೆ ಇರಾನಿ ಹ್ಯಾಕರ್ಸ್ ಗುಂಪು
Last Updated 26 ಆಗಸ್ಟ್ 2022, 6:12 IST
ಅಕ್ಷರ ಗಾತ್ರ

ಬೆಂಗಳೂರು: ಗೂಗಲ್‌ನ ವಿವಿಧ ಸೇವೆಗಳನ್ನು ಬಳಸುತ್ತಿರುವ ಬಳಕೆದಾರರ ಮಾಹಿತಿಯನ್ನು ಇರಾನಿ ಮೂಲದ ಮಾಲ್ವೇರ್ ರಹಸ್ಯವಾಗಿ ಕದಿಯುತ್ತಿದೆ ಎಂದು ಗೂಗಲ್ ವರದಿ ಹೇಳಿದೆ.

ಸೈಬರ್ ಬೆದರಿಕೆ ಮತ್ತು ವಿಶ್ಲೇಷಣೆ ಕುರಿತು ವರದಿ ನೀಡುವ ಗೂಗಲ್‌ನ ಭದ್ರತಾ ತಂಡ, ಈ ಕುರಿತು ವರದಿ ಪ್ರಕಟಿಸಿದೆ.

ಹೈಪರ್‌ಸ್ಕೇಪ್ ಎನ್ನುವ ಟೂಲ್ ಒಂದನ್ನು ಇರಾನಿ ಹ್ಯಾಕರ್ಸ್ ಬಳಸುತ್ತಿದ್ದು, ‘ಚಾರ್ಮಿಂಗ್ ಕಿಟನ್‘ ಹೆಸರಿನ ಮಾಲ್ವೇರ್ ಮೂಲಕ ಗೂಗಲ್ ಬಳಕೆದಾರರನ್ನು ಗುರಿಯಾಗಿಸಿ, ಮಾಹಿತಿ ಕಳ್ಳತನ ಮಾಡಿದೆ.

ಹೈಪರ್‌ಸ್ಕೇಪ್ ಈ ಮೊದಲು ಜಿಮೇಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಔಟ್‌ಲುಕ್ ಬಳಕೆದಾರರ ಮಾಹಿತಿ ಕಳ್ಳತನ ಮಾಡಿರುವುದು ಪತ್ತೆಯಾಗಿತ್ತು.

ಬಳಕೆದಾರರ ಕಂಪ್ಯೂಟರ್‌ಗೆ ಹೈಪರ್‌ಸ್ಕೇಪ್ ಎನ್ನುವ ಮಾಲ್ವೇರ್ ಬಿಟ್ಟು, ಅದರ ಮೂಲಕ ಬ್ಯಾಂಕಿಂಗ್, ಹಣಕಾಸು ಮತ್ತು ವೈಯಕ್ತಿಕ ಮಾಹಿತಿಗೆ ಹ್ಯಾಕರ್ಸ್ ಕನ್ನ ಹಾಕುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT