ಜಿಮೇಲ್ ಸೇರಿದಂತೆ ಹಲವು ಗೂಗಲ್ ಸೇವೆ ಕೆಲಕಾಲ ಸ್ಥಗಿತ

ನವದೆಹಲಿ: ಜಿಮೇಲ್ ಮತ್ತು ವರ್ಕ್‌ಸ್ಪೇಸ್‌ನಂತಹ ಕೆಲವು ಗೂಗಲ್ ಸೇವೆಗಳು ಸೋಮವಾರ ಅಲ್ಪಾವಧಿ ಸ್ಥಗಿತ ಕಂಡಿದ್ದು ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವೆಡೆ ಬಳಕೆದಾರಿಗೆ ಈ ಸೇವೆಗಳ ಪ್ರವೇಶ ಸಾಧ್ಯವಾಗಲಿಲ್ಲ.
ಆನ್‌ಲೈನ್ ಸೇವೆ ಸ್ಥಗಿತ ಪತ್ತೆ ತಾಣವಾದ downdetector.comನಲ್ಲಿ ಸುಮಾರು ಶೇ 60 ಮಂದಿ ಗೂಗಲ್ ವೆಬ್‌ಸೈಟ್‌ನಲ್ಲಿ ಸಮಸ್ಯೆ ಎದುರಿಸಿರುವುದಾಗಿ ವರದಿ ಮಾಡಿದ್ದಾರೆ. ಶೇ 35 ರಷ್ಟು ಜನ ಲಾಗಿನ್‌ನಲ್ಲಿ ಸಮಸ್ಯೆ ಅನುಭವಿಸಿರುವುದಾಗಿ ಹೇಳಿದ್ದಾರೆ.
ಕೆಲವು ಬಳಕೆದಾರರು ತಾತ್ಕಾಲಿಕ ದೋಷ ಸಮಸ್ಯೆ ಎದುರಿಸಿದ್ದಾರೆ. ಹಲವಾರು ಬಳಕೆದಾರರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
‘ಎಲ್ಲ ಕಡೆಯೂ ಗೂಗಲ್ ಸರ್ವರ್ ಡೌನ್ ಇದೆಯಾ? ಜಿಮೇಲ್ ಸೇರಿದಂತೆ ಯಾವುದೇ ಎಐ ಸಾಧನ ಬಳಸಲು ಸಾಧ್ಯವಾಗುತ್ತಿಲ್ಲ ಎಂದು’ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ಸ್ಥಗಿತಕ್ಕೆ ನಿಖರ ಕಾರಣದ ಕುರಿತು ಕಂಪನಿ ಈವರೆಗೆ ಪ್ರತಿಕ್ರಿಯಿಸಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.