7

ಇನ್‌ಸ್ಟಾಗ್ರಾಂನಿಂದ IGTV App

Published:
Updated:

ಜನಪ್ರಿಯ ಸಾಮಾಜಿಕ ಮಾಧ್ಯಮಗಳಲ್ಲೊಂದಾದ ಇನ್‌ಸ್ಟಾಗ್ರಾಂ IGTV (ಇನ್‌ಸ್ಟಾಗ್ರಾಂ ಟಿವಿ) ಎಂಬ ಹೊಸ Appನ್ನು ಪರಿಚಯಿಸಿದೆ. ಇನ್‌ಸ್ಟಾಗ್ರಾಂನಲ್ಲಿ 1 ನಿಮಿಷದ ಕಿರು ವಿಡಿಯೊಗಳು ಜನಪ್ರಿಯವಾಗಿದ್ದರೂ, ಇನ್ನು ಮುಂದೆ ದೀರ್ಘ ಸಮಯದ ವಿಡಿಯೊಗಳನ್ನು ನೋಡುವ ಅವಕಾಶ ಈ App ಮೂಲಕ ಸಾಧ್ಯವಾಗಲಿದೆ.

APP ಡೌನ್‌ಲೋಡ್‌ ಮಾಡಿ: ಗೂಗಲ್ ಪ್ಲೇ ಸ್ಟೋರ್ ಅಥವಾ Apple App Store ನಿಂದ IGTV APP ಡೌನ್ ಲೋಡ್ ಮಾಡಿ. ಇನ್‌ಸ್ಟಾಗ್ರಾಂ ಖಾತೆ ಹೊಂದಿರುವವರು ಅಪ್ ಲೋಡ್ ಮಾಡಿರುವ ದೀರ್ಘ, ವರ್ಟಿಕಲ್ ವಿಡಿಯೊಗಳನ್ನು ಇಲ್ಲಿ ಕಾಣಬಹುದು. ಈ ವಿಡಿಯೊಗಳು ಮೊಬೈಲ್ ಪರದೆಯ ಗಾತ್ರಕ್ಕನುಸಾರವಾಗಿ ಕಾಣುತ್ತವೆ. ಗರಿಷ್ಠ 3.6 ಗಿಗಾಬೈಟ್ ಗಾತ್ರದ ವಿಡಿಯೊಗಳನ್ನು ಇಲ್ಲಿ ಅಪ್ ಲೋಡ್ ಮಾಡಬಹುದು.

ಹೊಸತೇನಿರುತ್ತದೆ?

ಲಾಗಿನ್ ಆದ ಕೂಡಲೇ ನೀವು ಈಗಾಗಲೇ ಇನ್ ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿರುವ ವ್ಯಕ್ತಿಗಳು ಅಪ್ ಲೋಡ್ ಮಾಡಿರುವ ವಿಡಿಯೊಗಳು Auto Play ಆಗುತ್ತವೆ. ಈ App ನ ವಿವಿಧ ಟ್ಯಾಬ್ ಗಳಲ್ಲಿ For You, Following, Popular, Continue Watching ಮೊದಲಾದ ಆಪ್ಶನ್ ಗಳು ಕಾಣುತ್ತವೆ. Popular ಎಂದು ತೋರಿಸುವ ಟ್ಯಾಬ್‌ನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಜನಪ್ರಿಯವಾದ ವಿಡಿಯೊಗಳು ಕಾಣಿಸುತ್ತವೆ.

ಇನ್‌ಸ್ಟಾಗ್ರಾಂ ವಿಡಿಯೊ ಮತ್ತು IGTV ನಲ್ಲಿ ವ್ಯತ್ಯಾಸ ಏನಿದೆ?: ಇನ್‌ಸ್ಟಾಗ್ರಾಂನಂತೆ ಇಲ್ಲಿ ವಿಡಿಯೊಗಳು ಪ್ಲೇ ಆಗುತ್ತಿದ್ದರೂ ಅವುಗಳ ಅವಧಿ ಹೆಚ್ಚಿರುತ್ತದೆ. IGTV ಮೂಲಕ ಬಳಕೆದಾರರು 1 ಗಂಟೆ ಅವಧಿಯ ವಿಡಿಯೊವನ್ನು ಯಾವುದೇ ಅಡೆತಡೆ ಇಲ್ಲದೆ ವೀಕ್ಷಿಸಬಹುದು. ಇನ್ ಸ್ಟಾಗ್ರಾಂನಲ್ಲಿ ನಾವು ಫಾಲೋ ಮಾಡುತ್ತಿರುವ ಖಾತೆದಾರರ ವಿಡಿಯೊಗಳನ್ನು ಮಾತ್ರ ಇಲ್ಲಿ ನೋಡಬಹುದಾಗಿದೆ. ಇನ್‌ಸ್ಟಾಗ್ರಾಂನಂತೆ ಇದು ಉಚಿತ App ಆಗಿದೆ. ನಿಮ್ಮ ಇಷ್ಟದ ವಿಡಿಯೊಗಳನ್ನು ವೀಕ್ಷಿಸುವುದಕ್ಕೂ ಯಾವುದೇ ಶುಲ್ಕ ನೀಡಬೇಕಾಗಿಲ್ಲ.

ವಿಡಿಯೊ ಅಪ್ ಲೋಡ್ ಮಾಡುವುದು ಹೇಗೆ?: IGTV ಓಪನ್ ಮಾಡಿದಾಗ ಅಲ್ಲಿ ನಿಮ್ಮ ಇನ್ ಸ್ಟಾಗ್ರಾಂ ಪ್ರೊಫೈಲ್ ಚಿತ್ರದ ಪಕ್ಕ ಸೆಟ್ಟಿಂಗ್ ಆಪ್ಶನ್ ಕಾಣುತ್ತದೆ. ಅಲ್ಲಿ ಕ್ಲಿಕ್ ಮಾಡಿ ಸೆಟ್ಟಿಂಗ್ಸ್ ವಿಂಡೋಗೆ ಬಂದಾಗ ಕ್ರಿಯೇಟ್ ಚಾನೆಲ್ ಎಂಬ ಆಪ್ಶನ್ ಕಾಣುತ್ತದೆ. ಕ್ರಿಯೇಟ್ ಯುವರ್ ಚಾನೆಲ್‌ನಲ್ಲಿ ನೆಕ್ಸ್ಟ್ ಬಟನ್ ಕ್ಲಿಕ್ಕಿಸಿ.

Share Longer video ಎಂಬ ಆಪ್ಶನ್ ಬಂದಾಗ ನೆಕ್ಟ್ಸ್ ಬಟನ್ ಕ್ಲಿಕ್ಕಿಸಿ ಮುಂದಿನ ಹಂತಕ್ಕೆ ಹೋಗಿ. Built For Vertical ಎಂಬ ಆಯ್ಕೆಯ ಕೆಳಗೆ ಕ್ರಿಯೇಟ್ ಚಾನೆಲ್ ಬಟನ್ ಕ್ಲಿಕ್ ಮಾಡಿ. ಈಗ ನಿಮ್ಮ ಚಾನೆಲ್ ಕ್ರಿಯೇಟ್ ಆಗಿರುತ್ತದೆ. ಮುಂದಿನ ಹಂತದಲ್ಲಿ ಬ್ರೌಸ್ ಎಂಬ ಆಪ್ಶನ್ ಕಾಣುತ್ತದೆ, ಬಲಭಾಗದಲ್ಲಿರುವ ಪ್ಲಸ್ (+) ಚಿಹ್ನೆ ಒತ್ತಿದಾಗ ನಿಮ್ಮ ಫೋನ್‌ನಲ್ಲಿರುವ ವಿಡಿಯೊ, ಚಿತ್ರಗಳನ್ನು Access ಮಾಡಲು ಅನುಮತಿ ಕೇಳುತ್ತದೆ. ಅನುಮತಿ ನೀಡಿದ ನಂತರ ನಿಮ್ಮ ಫೋನ್ ಗ್ಯಾಲರಿಯಿಂದ ನಿಮ್ಮ ಆಯ್ಕೆಯ ವಿಡಿಯೊಗಳನ್ನು ಅಪ್ ಲೋಡ್ ಮಾಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !