ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ ಪವರ್ ಬಳಸೋಣ

Last Updated 24 ಜುಲೈ 2019, 19:30 IST
ಅಕ್ಷರ ಗಾತ್ರ

ಈವರೆಗೆ ಸೋಲಾರ್ ಪವರ್, ಎಲೆಕ್ಟ್ರಿಕ್ ಪವರ್, ವಿಂಡ್‌ ಪವರ್‌ನಂತಹ ಹೆಸರುಗಳು, ಶಬ್ದಗಳಷ್ಟೇ ನಮ್ಮ ಕಿವಿಗೆ ಬಿದ್ದಿವೆ. ಮುಂದಿನ ದಿನಗಳಲ್ಲಿ ‘ಫೇಸ್‌ ಪವರ್’ ಎಂಬ ಶಬ್ದವೂ ಸಂಚಲನ ಮೂಡಿಸುವ ಸಾಧ್ಯತೆ ಇದೆ.

ಫೇಸ್‌ ಪವರ್‌ ಎಂದ ಕೂಡಲೇ ತಲೆ ಕೆಡಿಸಿಕೊಂಡು ಯೋಚಿಸುವ ಅಗತ್ಯವಿಲ್ಲ. ಮುಖದ ಚಲನ–ವಲನಗಳನ್ನೇ ಬಳಸಿಕೊಂಡು ನಮ್ಮ ನಿತ್ಯ ಕಾರ್ಯಗಳನ್ನು ಮಾಡಿಕೊಳ್ಳುವುದಷ್ಟೇ. ಉದಾಹರಣೆಗೆ ಚಕ್ರಗಳಿರುವ ಕುರ್ಚಿಯನ್ನು ಚಲಿಸುವುದು.

ಬ್ರೆಜಿಲ್‌ನ ಹೂಬಾಕ್ಸ್‌ ರೋಬೊಟಿಕ್ಸ್‌ ಎಂಬ ನವೋದ್ಯಮವೊಂದು ಈ ತಂತ್ರಜ್ಞಾನದ ಬೆನ್ನು ಬಿದ್ದಿದೆ. ಇಂಟೆಲ್ ರಿಯಲ್ ಸೆನ್ಸ್‌ ಫೇಷಿಯಲ್‌ ರೆಕನೈಸೇಷನ್‌ ತಂತ್ರಜ್ಞಾನ ಆಧಾರಿತ ಮೊದಲ ಗಾಲಿ ಕುರ್ಚಿಯನ್ನು ಈ ಸಂಸ್ಥೆ ತಯಾರಿಸಿದೆ. ಇದರಲ್ಲಿ ಹಲವು ಸೆನ್ಸಾರ್‌ಗಳನ್ನು ಅಳವಡಿಸಲಾಗಿದ್ದು, ನಮ್ಮ ಮುಖದ ಲಕ್ಷಣಗಳನ್ನು ಚಲನಗಳನ್ನು ಗಮನಿಸಿ ಬೇಕೆಂದ ಕಡೆಗೆ ಈ ಕುರ್ಚಿ ಚಲಿಸುತ್ತದೆ. ಈ ಕುರ್ಚಿಯ ಹೆಸರು ವೀಲಿ (wheelie).

ಕುರ್ಚಿಗೆ ಅಳವಡಿಸಿರುವ ಕ್ಯಾಮೆರಾ ನಮ್ಮ ಮುಖದ ಚಲನಗಳನ್ನು ಗುರುತಿಸುತ್ತದೆ. ಪ್ರತಿಯೊಂದು ಚಲನಕ್ಕೂ ಒಂದೊಂದು ಕಮಾಂಡ್ ಕೊಟ್ಟು ಕಾರ್ಯನಿರ್ವಹಿಸುವಂತೆ ಈ ಕುರ್ಚಿಯನ್ನು ತಯಾರಿಸಲಾಗಿದೆ. ಉದಾಹರಣೆಗೆ ಕಿರು ನಗೆ ಬೀರಿದರೆ ಸಾಕು ಕುರ್ಚಿ ಮುಂದಕ್ಕೆ ಚಲಿಸುತ್ತದೆ.

ಮೂತಿಯನ್ನು ಎಡಕ್ಕೆ, ಬಲಕ್ಕೆ ತಿರುಗಿಸುವುದರಿಂದ ಕುರ್ಚಿಯು ಎಡಕ್ಕೆ, ಬಲಕ್ಕೆ ತಿರುಗುತ್ತದೆ. ತುಟಿಗಳನ್ನು ಬಿಗಿದರೆ ಕುರ್ಚಿಗೆ ಬ್ರೇಕ್ ಹಾಕಬಹುದು. ಯಂತ್ರಚಾಲಿತ ಈ ಕುರ್ಚಿಯನ್ನು ಕೇವಲ 7 ನಿಮಿಷಗಳಲ್ಲಿ ಸೆಟ್ ಮಾಡಬಹುದು.

ಪಾರ್ಶ್ವವಾಯು, ಹೃದ್ರೋಗ, ಕಾಲಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ಕುರ್ಚಿ ಹಲವು ವಿಧದಲ್ಲಿ ನೆರವಾಗುತ್ತದೆ ಎಂದು ನವೋದ್ಯಮ ಹೇಳಿಕೊಂಡಿದೆ. ‌

ಇದು ಪ್ರಾಯೋಗಿಕ ಹಂತದಲ್ಲಿದೆ. ಇದರಿಂದ ಉತ್ತೇಜಿತರಾಗಿ ಫೇಸ್‌ ಪವರ್‌ ಅನ್ನು ಇನ್ನೂ ಹಲವು ರೂಪಗಳಲ್ಲಿ ಬಳಸಿಕೊಳ್ಳುವ ತಂತ್ರಜ್ಞಾನ ಮುಂದೆ ಬರಲೂಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT