ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lionel Messi | ಬೈಜೂಸ್‌ನ ಜಾಗತಿಕ ರಾಯಭಾರಿಯಾಗಿ ಲಯೊನೆಲ್‌‌ ಮೆಸ್ಸಿ ನೇಮಕ

Last Updated 4 ನವೆಂಬರ್ 2022, 11:19 IST
ಅಕ್ಷರ ಗಾತ್ರ

ನವದೆಹಲಿ: ಕತಾರ್‌ನಲ್ಲಿ ನಡೆಯಲಿರುವ 2022ರ ಫಿಫಾ ಫುಟ್ಬಾಲ್ ವಿಶ್ವಕಪ್‌ ಸರಣಿಗೆ ಪ್ರಾಯೋಜಕತ್ವ ನೀಡಿರುವ ಭಾರತದ ಏಕೈಕ ಕಂಪನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಮೂಲದ ಶೈಕ್ಷಣಿಕ ಆ್ಯಪ್ ಸ್ಟಾರ್ಟಪ್‌ ಕಂಪನಿ 'ಬೈಜೂಸ್‌', ಇದೀಗ ತನ್ನ ಜಾಗತಿಕ ರಾಯಭಾರಿಯಾಗಿ ಖ್ಯಾತ ಫುಟ್‌ಬಾಲ್ ತಾರೆ ಲಯೊನೆಲ್‌‌ ಮೆಸ್ಸಿ ಮೆಸ್ಸಿ ಅವರನ್ನು ನೇಮಕ ಮಾಡಿಕೊಂಡಿದೆ.

'ಬೈಜೂಸ್‌' ತನ್ನ ಸಾಮಾಜಿಕ ಕಾರ್ಯಕ್ರಮ ‘ಸರ್ವರಿಗೂ ಶಿಕ್ಷಣ’ (Education For All) ದ ಜಾಗತಿಕ ರಾಯಭಾರಿಯನ್ನಾಗಿ ಮೆಸ್ಸಿ ಅವರನ್ನು ನೇಮಕ ಮಾಡಿದೆ.

ಈ ಬಗ್ಗೆ ಮೆಸ್ಸಿ ಜತೆ 'ಬೈಜೂಸ್‌' ಒಪ್ಪಂದ ಮಾಡಿಕೊಂಡಿದ್ದು, ಜಾಗತಿಕವಾಗಿ 'ಬೈಜೂಸ್‌'ನ ಈ ಕಾರ್ಯಕ್ರಮವನ್ನು ಅವರು ಪ್ರಚಾರ ಮಾಡಲಿದ್ದಾರೆ.

‘ಲಯೊನೆಲ್‌‌ ಮೆಸ್ಸಿ ಮೆಸ್ಸಿ ಅವರು ಜಗತಿಕ ರಾಯಭಾರಿಯಾಗಿ ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ನಮಗೆ ಹೆಮ್ಮೆಯ ವಿಚಾರ. ಅವರು ತಳಮಟ್ಟದಿಂದ ಬೆಳೆದು ಬಂದು ಇದೀಗ ಭಾರೀ ಯಶಸ್ಸು ಪಡೆದ ಕ್ರೀಡಾಪಟುವಾಗಿ ಬೆಳೆದಿದ್ದಾರೆ. ಇದೇ ಥರದ ಅವಕಾಶವನ್ನು ‘ಎಲ್ಲರಿಗೂ ಶಿಕ್ಷಣ’ ಉಪಕ್ರಮದಡಿ 55 ಲಕ್ಷ ವಿದ್ಯಾರ್ಥಿಗಳಿಗೆ ಕಲ್ಪಿಸಲು 'ಬೈಜೂಸ್‌' ಉದ್ದೇಶಿಸಿದೆ. ಮಾನವ ಸಾಮರ್ಥ್ಯವನ್ನು ಹೆಚ್ಚಿಸುವ ಉದಾಹರಣೆಗೆ ಲಯೊನೆಲ್‌‌ ಮೆಸ್ಸಿ ಮೆಸ್ಸಿಗಿಂತ ಬೇರೆ ಉದಾಹರಣೆ ಬೇಕಿಲ್ಲ’ ಎಂದು 'ಬೈಜೂಸ್‌'ನ ಸಹ ಸಂಸ್ಥಾಪಕಿ ದಿವ್ಯಾ ಗೋಕುಲ್‌ನಾಥ್‌ ಹೇಳಿದ್ದಾರೆ.

‘ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟುವೊಬ್ಬರು ಸರ್ವಶ್ರೇಷ್ಠ ಅಧ್ಯಯನಶಾಲಿಯೂ ಹೌದು. ಮೆಸ್ಸಿಯೊಂದಿಗಿನ ನಮ್ಮ ಸಹಯೋಗವು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ದೊಡ್ಡ ಕನಸು ಕಾಣಲು ಹಾಗೂ ಅಧ್ಯಯನ ಮಾಡಲು ಪ್ರೇರಣೆ ನಿಡಲಿದೆ’ ಎಂದು ದಿವ್ಯಾ ಹೇಳಿದ್ದಾರೆ.

ಮೆಸ್ಸಿ ಅವರು ಕೂಡ ಈ ಸಹಯೋಗದ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ‘ ಉನ್ನತ ಗುಣಮಟ್ಟದ ಶಿಕ್ಷಣ ಜೀವನವನ್ನು ಬದಲಾಯಿಸುತ್ತದೆ. ವಿಶ್ವದಾದ್ಯಂತ ಇರುವ ಲಕ್ಷಾಂತರ ಮಂದಿಯ ಉದ್ಯೋಗದ ಹಾದಿಯನ್ನು 'ಬೈಜೂಸ್‌' ಬದಲಾಯಿಸಿದೆ. ಯುವಕರಿಗೆ ಇನ್ನಷ್ಟು ಪ್ರೇರಣೆಯಾಗಲು ನಾನು ಉತ್ಸುಕನಾಗಿದ್ದೇನೆ’ ಎಂದು ಹೇಳಿದ್ದಾರೆ.

ಮೆಸ್ಸಿ ಜತೆಗಿನ ಈ ಒಪ್ಪಂದ 'ಬೈಜೂಸ್‌'ಗೆ ಹೆಚ್ಚಿನ ಪ್ರಚಾರ ತಂದು ಕೊಡುವ ನಿರೀಕ್ಷೆ ಇದೆ. ಜಾಗತಿಕವಾಗಿ ಫುಟ್‌ಬಾಲ್‌ಗೆ 350 ಕೋಟಿ ಮಂದಿಯಷ್ಟು ಅಭಿಮಾನಿಗಳು ಇದ್ದಾರೆ. ಮೆಸ್ಸಿಯವರ ಸಾಮಾಜಿಕ ಜಾಲತಾಣ ಖಾತೆಗಳಿಗೆ ಸುಮಾರು 45 ಕೋಟಿ ಮಂದಿ ಹಿಂಬಾಲಕರಿದ್ದಾರೆ. ಹೀಗಾಗಿ ಇದು 'ಬೈಜೂಸ್‌'ಗೆ ಹೆಚ್ಚಿನ ಪ್ರಚಾರ ತಂದುಕೊಡಲಿದೆ ಎಂದು ನಂಬಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT