ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ನಂ. 1

ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಜುಲೈ 2ರಿಂದ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್ ಲಭ್ಯವಾಗುತ್ತಿದೆ.

ಬಿಡುಗಡೆಯಾದ ಒಂದೇ ದಿನದಲ್ಲಿ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅತಿ ಹೆಚ್ಚಿನ ಡೌನ್‌ಲೋಡ್ ದಾಖಲಿಸಿದೆ.

ಮೊಬೈಲ್ ಗೇಮಿಂಗ್ ಅಪ್ಲಿಕೇಶನ್ ವಿಭಾಗದಲ್ಲಿ ಗರೇನಾ ಫ್ರೀ ಫೈರ್ ಅನ್ನು ಹಿಂದಿಕ್ಕಿದ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ, 1 ಕೋಟಿಗೂ ಅಧಿಕ ಬಳಕೆದಾರರನ್ನು ಮೊದಲ 24 ಗಂಟೆಯಲ್ಲೇ ಪಡೆದುಕೊಂಡಿದೆ.

ದೇಶದಲ್ಲಿ ಪಬ್‌ಜಿ ಮೊಬೈಲ್ ನಿಷೇಧವಾದ ಬಳಿಕ, ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಮೊಬೈಲ್ ಗೇಮ್ ಅನ್ನು ಅಭಿವೃದ‌್ಧಿಪಡಿಸಲಾಗಿದ್ದು, ಸರ್ವರ್ ನಿರ್ವಹಣೆಯನ್ನು ಕೂಡ ಭಾರತದಲ್ಲಿಯೇ ಮಾಡಲಾಗುತ್ತಿದೆ.

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್ ಬಿಡುಗಡೆಗೂ ಮೊದಲು 40 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಪ್ರಿ ರಿಜಿಸ್ಟ್ರೇಶನ್ ಪಡೆದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT