ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್: ರಾಜ್ಯದಲ್ಲಿ ದೊಡ್ಡ ಸ್ಕ್ರೀನ್‌ ಟಿ.ವಿ., ವಾಷಿಂಗ್ ಮೆಷಿನ್ ಬಿಡುಗಡೆ

Last Updated 22 ಸೆಪ್ಟೆಂಬರ್ 2020, 13:21 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯಿಂದಲೇ ಕಾರ್ಯನಿರ್ವಹಣೆ ಹೆಚ್ಚಿರುವ ಈ ಸಮಯದಲ್ಲಿ ಕರ್ನಾಟಕದಲ್ಲಿ ಗ್ರಾಹಕರು ದೊಡ್ಡ ಸ್ಕ್ರೀನ್‌ನ ಸ್ಯಾಮ್‌ಸಂಗ್‌ ಸ್ಮಾರ್ಟ್‌ ಟಿವಿಗಳು, ಅಧಿಕ ಸಾಮರ್ಥ್ಯದ ವಾಷಿಂಗ್‌ ಮೆಷಿನ್‌ಗಳು ಹಾಗೂ ರೆಫ್ರಿಜರೇಟರ್‌ಗಳಿಗೆ ಅಪ್‌ಗ್ರೇಡ್‌ ಮಾಡಿಕೊಳ್ಳುತ್ತಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನಕ್ಕೆ ಅಪ್‌ಗ್ರೇಡ್‌ ಮಾಡಿಕೊಳ್ಳಲು ಗ್ರಾಹಕರು ಆಸಕ್ತಿ ತೋರಿದ್ದು, ಆಗಸ್ಟ್‌ನಲ್ಲಿ ಸ್ಯಾಮ್‌ಸಂಗ್‌ನ 55 ಇಂಚು ಮತ್ತು ಅದಕ್ಕಿಂತ ದೊಡ್ಡ ಸ್ಕ್ರೀನ್‌ ಟಿವಿಗಳ ಮಾರಾಟದಲ್ಲಿ ಶೇ.62ರಷ್ಟು, 8 ಕೆ.ಜಿ ಸಾಮರ್ಥ್ಯಕ್ಕಿಂತ ಹೆಚ್ಚಿನ ವಾಷಿಂಗ್ ಮೆಷಿನ್‌ಗಳಲ್ಲಿ ಶೇ.6ರಷ್ಟು ಪ್ರಗತಿ ಕಂಡಿದೆ. ಸ್ಯಾಮ್‌ಸಂಗ್ ಕರ್ನಾಟಕದಲ್ಲಿ ಶೇ.24.5ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು, ತನ್ನ ಗ್ರಾಹಕ ಉತ್ಪನ್ನಗಳ ವಹಿವಾಟನ್ನು ದುಪ್ಪಟ್ಟುಗೊಳಿಸುವ ಗುರಿ ಹೊಂದಿದೆ.

ದೊಡ್ಡ ನಗರಗಳಲ್ಲಿ ಮಾತ್ರವಲ್ಲದೆ ಟೈಯರ್-2 ಮತ್ತು ಟೈಯರ್-3 ನಗರಗಳಲ್ಲಿ ಹಾಗೂ ಕರ್ನಾಟಕದ ಗ್ರಾಮೀಣ ಭಾಗಗಳಲ್ಲೂ ಹೈಜೀನ್ ಸ್ಟೀಂನಂತಹ ಆಟೊಮ್ಯಾಟಿಕ್‌ ವಾಷಿಂಗ್‌ ಮೆಷಿನ್ ಕೊಳ್ಳುವಿಕೆ ಹೆಚ್ಚುತ್ತಿದೆ. ಹಾಗೇ ದೊಡ್ಡ ಸಾಮರ್ಥ್ಯದ ರೆಫ್ರಿಜರೇಟರ್‌ಗಳಿಗೂ ಬೇಡಿಕೆ ಬಂದಿದೆ. ಕರ್ಡ್‌ ಮ್ಯಾಸ್ಟ್ರೊ ಹಾಗೂ ಇಂಟರ್‌ನೆಟ್‌ ಸಂಪರ್ಕಿತ ಸ್ಪೇಸ್‌ಮ್ಯಾಕ್ಸ್ ಫ್ಯಾಮಿಲಿ ಹಬ್ ರೆಫ್ರಿಜಿರೇಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಸ್ಯಾಮ್‌ಸಂಗ್‌ನ ಸುಂದರ ಲೈಫ್‌ಸ್ಟೈಲ್‌ ಟಿ.ವಿ.ಗಳು, ಹೊಸ ಫ್ರಂಟ್ ಲೋಡ್ ಹೈಜೀನ್ ಸ್ಟೀಮ್ ವಾಷಿಂಗ್ ಮೆಷಿನ್‌ಗಳು ಇತ್ಯಾದಿಗಳ ಮೂಲಕ ಗ್ರಾಹಕರ ವಿಸ್ತರಿಸುತ್ತಿರುವ ಅಗತ್ಯಗಳನ್ನು ಪೂರೈಸಲಿದ್ದೇವೆ ಎಂದು ಗಿರಿಯಾಸ್ ಇನ್ವೆಸ್ಟ್‌ಮೆಂಟ್‌ ಪ್ರೈ.ಲಿ. ನಿರ್ದೇಶಕ ಮನಿಶ್ ಗಿರಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT