ಮಂಗಳವಾರ, ಮೇ 18, 2021
30 °C

ತಮಿಳುನಾಡಿನಲ್ಲಿ ಟಾಟಾ, ಪೆಗಟ್ರಾನ್ ಸ್ಮಾರ್ಟ್‌ಫೋನ್ ತಯಾರಿಕ ಘಟಕ

ಡೆಕ್ಕನ್ ಹೆರಾಲ್ಡ್ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ದೇಶದ ಪ್ರಮುಖ ಉದ್ಯಮ ಸಂಸ್ಥೆ ಟಾಟಾ ಸಮೂಹದ ಟಾಟಾ ಎಲೆಕ್ಟ್ರಾನಿಕ್ಸ್, ಚೆನ್ನೈನಲ್ಲಿ ತೈವಾನ್ ಮೂಲದ ಪೆಗಟ್ರಾನ್ ಕಾರ್ಪೊರೇಶನ್ ತಮಿಳುನಾಡಿನಲ್ಲಿ ಮೊಬೈಲ್ ಫೋನ್ ಉತ್ಪಾದನಾ ಘಟಕ ಮತ್ತು ಬಿಡಿಭಾಗ ತಯಾರಿಕ ಘಟಕ ಸ್ಥಾಪಿಸಲು ಮುಂದಾಗಿದೆ.

ಟಾಟಾ ಎಲೆಕ್ಟ್ರಾನಿಕ್ಸ್ ಒಟ್ಟು ₹ 57.63 ಬಿಲಿಯನ್ ಹೂಡಿಕೆ ಮಾಡಲು ಮುಂದಾಗಿದೆ. ಪೆಗಟ್ರಾನ್ ₹ 11 ಬಿಲಿಯನ್ ಹೂಡಿಕೆ ಮೂಲಕ ಮೊದಲ ಹಂತದಲ್ಲಿ ಕೈಜೋಡಿಸುತ್ತಿದೆ. ಈ ಹೂಡಿಕೆಯನ್ನು ತಮಿಳುನಾಡು ಸರ್ಕಾರ ಕೂಡ ದೃಢಪಡಿಸಿದೆ.

ಜಾಗತಿಕ ಮಟ್ಟದಲ್ಲಿ ಭಾರತವನ್ನು ಸ್ಮಾರ್ಟ್‌ಫೋನ್ ಹಬ್ ಆಗಿ ರೂಪಿಸುವುದು ಮತ್ತು ಚೀನಾದಿಂದ ಹೊರಹೋಗುತ್ತಿರುವ ಟೆಕ್ ಕಂಪನಿಗಳನ್ನು ದೇಶಕ್ಕೆ ಸೆಳೆಯುವುದು ಇದರ ಉದ್ದೇಶವಾಗಿದೆ.

ಈಗಾಗಲೇ ಚೀನಾದಿಂದ ಹಲವು ಕಂಪನಿಗಳು ಭಾರತ, ವಿಯೆಟ್ನಾಂ, ತೈವಾನ್ ಮತ್ತಿತರ ರಾಷ್ಟ್ರಗಳಿಗೆ ಸ್ಥಳಾಂತರಗೊಂಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು