ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಜಾಗೃತಿ: ವೈರಲ್ ವಿಡಿಯೊದಲ್ಲಿ ಕನ್ನಡಿಗ ಡಾ.ದಿನೇಶ್ ಶೆಟ್ಟಿ ಹೇಳಿದ್ದೇನು?

ವಿಡಿಯೊ ಸುದ್ದಿ
Last Updated 21 ಮಾರ್ಚ್ 2020, 5:04 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಕೊರೊನಾವೈರಸ್‌ (ಕೊವಿಡ್‌–19) ಸೋಂಕು ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ಅದನ್ನು ತಡೆಯಲು ಜನರು ಅನುಸರಿಸಬೇಕಾದ ನಡೆಗಳ ಬಗ್ಗೆ ಕನ್ನಡಿಗ ವೈದ್ಯರೊಬ್ಬರು ನೀಡಿರುವ ಸಲಹೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೋಂಕು ತಡೆಯುವ ಸಲುವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ (ಸೋಶಿಯಲ್ ಡಿಸ್ಟೆನ್ಸಿಂಗ್) ಮಹತ್ವದ ಬಗ್ಗೆ ಕುಂದಾಪುರ ಮೂಲದ ವೈದ್ಯ, ವಿಜ್ಞಾನಿ ಹಾಗೂ ಪ್ರೊಫೆಸರ್ ಆಗಿರುವ ಡಾ.ದಿನೇಶ್ ಶೆಟ್ಟಿ ವಿಡಿಯೊದಲ್ಲಿ ವಿವರಣೆ ನೀಡಿದ್ದಾರೆ. ಜನ ಏನೇನು ಮುನ್ನೆಚ್ಚರಿಕೆ ಕೈಗೊಳ್ಳಬೇಕು? ಅದರಿಂದಾಗುವ ಪ್ರಯೋಜನವೇನು? ಈಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೇನಾಗಬಹುದು ಎಂಬುದನ್ನು ದಿನೇಶ್ ಶೆಟ್ಟಿ ಅವರು ವಿಡಿಯೊದಲ್ಲಿ ವಿವರಿಸಿದ್ದಾರೆ.

ವಿಡಿಯೊವೀಗ ಫೇಸ್‌ಬುಕ್, ವಾಟ್ಸ್‌ಆ್ಯಪ್ ಸೇರಿದಂತೆ ಅನೇಕ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಶೇರ್ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT