ಶುಕ್ರವಾರ, ಮಾರ್ಚ್ 31, 2023
31 °C

ವೈರಲ್‌ ವಿಡಿಯೊ ನೋಡಿ: ದುಬೈನಲ್ಲಿದೆ 196 ಅಡಿ ಆಳದ ಈಜು ಕೊಳ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗತ್ತಿನ ಅತಿ ಆಳವಾದ ಈಜು ಕೊಳ ದುಬೈನಲ್ಲಿ ನಿರ್ಮಾಣಗೊಂಡಿದ್ದು ಇದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. 

ಈಗಾಗಲೇ ಸಾರ್ವಜನಿಕ ಬಳಕೆಗೆ ಮುಕ್ತವಾಗಿರುವ ಈ ನೂತನ ಸ್ವಿಮ್ಮಿಂಗ್‌ ಪೂಲ್‌ ಈಜು ಪ್ರಿಯರ ಗಮನ ಸೆಳೆದಿದೆ. ದುಬೈನ ಯುವ ರಾಜ ಶೇಖ್‌ ಹಮ್ದಾನ್‌ ಬಿನ್‌ ಮೊಹಮ್ಮದ್‌ ನೂತನ ಈಜು ಕೊಳದ ವಿಡಿಯೊವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಇಡೀ ಜಗತ್ತು ಎದುರು ನೋಡುತ್ತಿದ್ದ ಅತಿ ಆಳವಾದ ಈಜು ಕೊಳ ಸಾರ್ವಜನಿಕರಿಗೆ ಮುಕ್ತವಾಗಿದೆ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಕೊಳದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಹಾಗೇ ಅತಿ ಆಳಕ್ಕೆ ಡೈವ್‌ ಹೊಡೆಯಬಹುದು ಎಂದು ಹಮ್ದಾನ್‌ ಬಿನ್‌ ಮೊಹಮ್ಮದ್‌ ಹೇಳಿದ್ದಾರೆ.

ದುಬೈನ ಅಲ್‌ ಶೆಬಾ ಪ್ರದೇಶದಲ್ಲಿ ಈ ಈಜು ಕೊಳ ನಿರ್ಮಾಣವಾಗಿದೆ. ಇದು 196 ಅಡಿ (60 ಮೀಟರ್‌) ಆಳವಿದೆ. ಡೀಪ್‌ ಡೈವಿಂಗ್‌ ಮಾಡುವವರಿಗೆ ಇದು ಅನುಕೂಲಕರವಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು