ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಠಪೂರ್ತಿ ಮದ್ಯಸೇವಿಸಿ ಮದುವೆ ಮನೆಗೆ ಬಂದ ವರ! ಆಮೇಲೆ ಆಗಿದ್ದೇನು?

Last Updated 11 ಮಾರ್ಚ್ 2023, 15:47 IST
ಅಕ್ಷರ ಗಾತ್ರ

ಗುವಾಹಟಿ: ಮದುವೆ ಸಂದರ್ಭದಲ್ಲಿ ವರ ಮದ್ಯಪಾನ ಮಾಡುವುದು ಹಾಗೂ ಆತನ ಸ್ನೇಹಿತರು ಮದ್ಯಪಾನ ಮಾಡುವುದು ಆಮೇಲೆ ಪೇಚಿಗೆ ಸಿಲುಕುವುದು ನಡೆಯುವುದುಂಟು.

ಆದರೆ, ಅಸ್ಸಾಂನ ಮದುವೆಯೊಂದರಲ್ಲಿ ವರ ಹಾಗೂ ಆತನ ಕುಟುಂಬದ ಶೇ 95 ರಷ್ಟು ಜನ ಕಂಠಪೂರ್ತಿ ಕುಡಿದು ವಧುವಿನ ಮನೆಗೆ ಬಂದಿದ್ದಾರೆ.

ಈ ಘಟನೆ ಅಸ್ಸಾಂನ ನಲಭಾರಿ ಜಿಲ್ಲೆಯಲ್ಲಿ ನಡೆದಿದ್ದು, ಕುಡುಕ ವರ ಹಾಗೂ ಅವನ ಕುಟುಂಬದವರನ್ನು ನೋಡಿ ಯುವತಿ ಮದುವೆ ರದ್ದು ಮಾಡಿದ್ದಾರೆ.

ಇನ್ನೊಂದು ವಿಶೇಷವೆಂದರೆ ಕಲ್ಯಾಣಮಂಟಪಕ್ಕೆ ತಯಾರಾಗಿ ಬಂದಿದ್ದ ವರ ಅಲ್ಲೂ ಕೂಡ ಮತ್ತಿನಲ್ಲಿ ಇದ್ದ. ಈ ವೇಳೆ ಸ್ನೇಹಿತರು ಪುರೋಹಿತ ಆತನನ್ನು ಎಚ್ಚರಿಸಲು ಪ್ರಯತ್ನಿಸಿದರೇ ಆತ ಮಾತ್ರ ಅಲ್ಲಿಯೇ ಮಲಗಿದ್ದಾನೆ. ಸದ್ಯ ಈ ಮದುವೆ ರದ್ದಾಗಿದ್ದು ಮದುವೆಗಾಗಿ ಮಾಡಿದ್ದ ವೆಚ್ಚವನ್ನು ಕೊಡಿಸಬೇಕು ಎಂದು ಯುವತಿ ‍ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಎನ್‌ಡಿಟಿವಿ ಸುದ್ದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT