ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡೋಲ್ಲ, ಕನ್ನಡ ಬರೋಲ್ಲ ಎಂದು ಉತ್ತರ ಭಾರತದ ಅನೇಕರು ಅನೇಕ ಬಾರಿ ಸ್ಥಳೀಯ ಜನತೆ ಜೊತೆ ಜಗಳ ಕಾಯುವುದುಂಟು.
ಇದೀಗ ಬೆಂಗಳೂರಿನಲ್ಲಿ ಇಂತದೇ ಪ್ರಸಂಗವೊಂದು ಮತ್ತೊಂದು ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.
‘ನಾನೇಕೆ ಕನ್ನಡ ಮಾತನಾಡಬೇಕು?’ ಹಿಂದಿಯಲ್ಲಿ ಮಾತನಾಡಿ ಎಂದಿದ್ದ ಯುವತಿಯೊಬ್ಬರನ್ನು ಆಟೋ ಚಾಲಕರೊಬ್ಬರು ತರಾಟೆಗೆ ತೆಗೆದುಕೊಂಡಿರುವ ವಿಡಿಯೊ ಅದಾಗಿದೆ. ಇದು ಕರ್ನಾಟಕ ನಾನೇಕೆ ಹಿಂದಿ ಮಾತನಾಡಬೇಕು. ಮೊದಲು ನೀವು ಕನ್ನಡ ಮಾತನಾಡಿ? ಎಂದು ಯುವತಿಯನ್ನು ಆಟೋದಿಂದ ಇಳಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಆ ಯುವತಿ ಒ.ಕೆ ಒ.ಕೆ ಎಂದು ಅಲ್ಲಿಂದ ನಿರ್ಮಗಮಿಸಿದ್ದಾರೆ. ವಿಡಿಯೊ ಹಂಚಿಕೊಂಡು ಟ್ವೀಟ್ ಮಾಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಆಟೋ ಚಾಲಕನನ್ನು ಶ್ಲಾಘಿಸಿದ್ದಾರೆ. ಆದರೆ ಈ ವಿಡಿಯೊ ಬೆಂಗಳೂರಿನಲ್ಲಿ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.