ಬೆಂಗಳೂರು: ವಾಹನ ದಟ್ಟಣೆಯ ಹೆದ್ದಾರಿ ಮೇಲೆ ಹೆಬ್ಬಾವೊಂದು ಬಂದು ಕಡೆಗೂ ಸುರಕ್ಷಿತವಾಗಿ ಕಾಡಿಗೆ ಮರಳಿರುವ ಘಟನೆ ಕೇರಳದಲ್ಲಿ ನಡೆದಿದೆ.

ಸದಾ ವಾಹನ ದಟ್ಟಣೆಯಿಂದ ಕೂಡಿರುವ ಕೊಚ್ಚಿಯ ವಿಮಾನ ನಿಲ್ದಾಣ ಹಾಗೂ ಸೀ ಪೋರ್ಟ್ ರಸ್ತೆಯ ಮೇಲೆದೈತ್ಯ ಇಂಡಿಯನ್ ರಾಕ್ ಫೈಥಾನ್ ತೆವಳುತ್ತಾ ಬಂದಿದೆ. ಅದರ ಅದೃಷ್ಟವೇನೋ ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ಸುರಕ್ಷಿತವಾಗಿ ಕಾಡಿಗೆ ತೆರಳಲು ಅವಕಾಶ ಮಾಡಿ ಕೊಟ್ಟಿದ್ದಾರೆ.

ಈ ಘಟನೆ ಕಳೆದ ಮಂಗಳವಾರ ಸಂಜೆ ನಡೆದಿದ್ದು, ಹಲವು ಪ್ರಾಣಿ ಪ್ರಿಯರು ಈ ವಿಡಿಯೊ ಹಂಚಿಕೊಂಡು ವಾಹನ ಸವಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಹೆಬ್ಬಾವಿನಿಂದ ಸುಮಾರು 10 ನಿಮಿಷ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಸ್ಥಳದಲ್ಲಿದ್ದವರು ಹೇಳಿದ್ದಾರೆ. ಕಾಡುಗಳಲ್ಲಿ ವಾಸಿಸುವ ಇಂಡಿಯನ್ ರಾಕ್ ಫೈಥಾನ್‌ಗಳು ಸಾಮಾನ್ಯವಾಗಿ ರಸ್ತೆ ಮೇಲೆ ಬರುವುದು ಅಪರೂಪ. ಭೇಟೆಯಾಡಿ ತೆವಳಲು ಆಗದೇ ಕೆಲ ಸಲ ತೊಂದರೆ ಅನುಭವಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.