ವಾರಾಣಸಿ: ಭಾರತದ ಸ್ಟ್ರೀಟ್ ಫುಡ್‌ಗಳನ್ನು ಮೆಚ್ಚದವರಿಲ್ಲ ಎನ್ನಬಹುದು. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಸ್ಟ್ರೀಡ್ ಫುಡ್‌ಗಳು ಜನಪ್ರಿಯತೆ ಗಳಿಸಿರುತ್ತವೆ.
ಇದೀಗ ವಾರಾಣಸಿಗೆ ಭೇಟಿಯಿತ್ತ ಭಾರತದಲ್ಲಿನ ಜಪಾನ್ ರಾಯಭಾರಿ ಹಿರೋಶಿ ಸುಜುಕಿ ಅವರು ಕಚೋರಿ, ಜಿಲೇಬಿಯನ್ನು ಸವಿದಿದ್ದಾರೆ. ಈ ಬಗ್ಗೆ ಅವರು ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡು, ‘ವಾರಾಣಸಿಯಲ್ಲಿ ಸ್ಟ್ರೀಟ್ ಫುಡ್ ತಿಂದು ಆನಂದಿಸುತ್ತಿದ್ದೇನೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಈ ಹಿಂದೆ ಪತ್ನಿ ಐಕೊ ಸುಜುಕಿ ಅವರೊಂದಿಗಿನ ಫೋಟೊ ಹಂಚಿಕೊಂಡು, ‘ನಾವು ವಾರಾಣಸಿಯಲ್ಲಿದ್ದೇವೆ’ ಎಂದು ಪೋಸ್ಟ್ ಹಂಚಿಕೊಂಡಿದ್ದರು.