ಗಂಡಸರಂತೆ ಮೀಸೆ ಬೆಳೆಸಿಕೊಂಡ ಮಹಿಳೆ: ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ವೈರಲ್

ತಿರುವನಂತಪುರ: ಗಂಡಸರು ಮೀಸೆ ಬೆಳೆಸಿಕೊಳ್ಳುವುದು ಸಾಮಾನ್ಯ. ಆದರೆ, ಕೇರಳದಲ್ಲಿ ಮಹಿಳೆಯೊಬ್ಬರು ಗಂಡಸರಂತೆ ಮೀಸೆ ಬೆಳೆಸುವ ಮೂಲಕ ಗಮನ ಸೆಳೆದಿದ್ದಾರೆ.
ಕೇರಳದ ಕಣ್ಣೂರು ಮೂಲದ 35 ವರ್ಷದ ಶೈಜಾ ಎಂಬುವವರು ತಮ್ಮ ತುಟಿಯ ಮೇಲೆ ಬಂದ ಮೀಸೆಯನ್ನು ಕತ್ತರಿಸದೇ ಬೆಳೆಸಿಕೊಂಡಿದ್ದಾರೆ. ಇದೀಗ ಶೈಜಾ ಅವರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಶೈಜಾ, ‘ಕೊರೊನಾ ಸಮಯದಲ್ಲಿ ನನಗೆ ಮಾಸ್ಕ್ ಹಾಕಲು ತುಂಬಾ ಕಷ್ಟವಾಗುತ್ತಿತ್ತು. ಮಾಸ್ಕ್ ಹಾಕಲು ನನಗೆ ಇಷ್ಟವಿರಲಿಲ್ಲ. ಅನೇಕರು ಮೀಸೆ ಕತ್ತರಿಸಲು ಹೇಳಿದ್ದರು. ಆದರೆ, ನಾನು ಕತ್ತರಿಸಿಕೊಂಡಿಲ್ಲ. ನಾನು ಸುಂದರವಾಗಿಲ್ಲ ಎಂದು ಗೊತ್ತಿದೆ. ನಾನು ಕಳೆದ 5 ವರ್ಷಗಳಿಂದ ಮೀಸೆ ಬೆಳೆಸಿಕೊಂಡಿದ್ದೇನೆ. ಇದೊಂದು ರೀತಿಯ ಟ್ರೆಂಡಿಂಗ್’ ಎಂದು ಹೇಳಿಕೊಂಡಿದ್ದಾರೆ.
‘ಐದು ವರ್ಷಗಳ ಹಿಂದೆ ಗರ್ಭಕಂಠ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಸ್ತನದ ಗಡ್ಡೆ ತೆಗೆದು ಹಾಕುವ ಶಸ್ತ್ರಚಿಕಿತ್ಸೆ, ಅಂಡಾಶಯದಿಂದ ಚೀಲ ತೆಗೆದು ಹಾಕಲು ಶಸ್ತ್ರಚಿಕಿತ್ಸೆ ಸೇರಿದಂತೆ ನಾನು ಈವರೆಗೆ ಆರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಪ್ರತಿ ಬಾರಿಯೂ ಇದು ನನ್ನ ಕೊನೆಯ ಚಿಕಿತ್ಸೆ ಎಂದುಕೊಳ್ಳುತ್ತಿದೆ. ಈಗ ನನ್ನಲ್ಲಿ ಆತ್ಮವಿಶ್ವಾಸ ಮೂಡಿದೆ. ಹಾಗಾಗಿ ನನಗೆ ಇಷ್ಟವಾಗುವಂತೆ ಬದುಕಲು ಬಯಸುತ್ತೇನೆ’ ಎಂದು ಶೈಜಾ ತಿಳಿಸಿದ್ದಾರೆ.
ನಾನು ಮೀಸೆ ಬೆಳೆಸಿಕೊಂಡಿರುವುದಕ್ಕೆ ಪತಿ ಹಾಗೂ ಕುಟುಂಬದವರು ವಿರೋಧಿಸಿಲ್ಲ. ಅನೇಕರು ಗೇಲಿ ಮಾಡಿದ್ದಾರೆ. ಆದರೆ, ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಶೈಜಾ ಅವರ ಮಾತಾಗಿದೆ.
ಇವನ್ನೂ ಓದಿ...
* ವಿಶ್ವದಾದ್ಯಂತ ತೆರೆಕಂಡ ವಿಕ್ರಾಂತ್ ರೋಣ: ಸುದೀಪ್ಗೆ ಶುಭ ಹಾರೈಸಿದ ರಾಜಮೌಳಿ
* ವಿಕ್ರಾಂತ್ ರೋಣ Twitter Review: ಸುದೀಪ್ ನಟನೆಗೆ ಬಹುಪರಾಕ್ ಎಂದ ಪ್ರೇಕ್ಷಕರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.