ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸೂರ್ಯನ ಓಂಕಾರ'ದ ವಿಡಿಯೊ ಹಂಚಿಕೊಂಡ ಕಿರಣ್‌ ಬೇಡಿ; ಫೇಕ್‌ ಎಂದ ಟ್ವೀಟಿಗರು

Last Updated 4 ಜನವರಿ 2020, 13:28 IST
ಅಕ್ಷರ ಗಾತ್ರ

ಬೆಂಗಳೂರು:ಜೀವ ಜಗತ್ತಿನ ಉಳಿವಿಗೆ ಕಾರಣವಾಗಿರುವ ''ಸೂರ್ಯ 'ಓಂ‘ ಜಪಿಸುತ್ತಿದ್ದಾನೆ, ನಾಸಾ ಅದರ ಶಬ್ದವನ್ನು ರೆಕಾರ್ಡ್‌ ಮಾಡಿದೆ''- ಇಂಥದ್ದೇ ಒಕ್ಕಣೆ ಹೊಂದಿರುವ ವಿಡಿಯೊ ಹಂಚಿಕೊಂಡಿರುವ ಪುದುಚೇರಿ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಟ್ವಿಟರ್‌ನಲ್ಲಿ ಟ್ರೋಲ್‌ ಆಗಿದ್ದಾರೆ.

ಶನಿವಾರ ಬೆಳಿಗ್ಗೆ ನಿವೃತ್ತಿ ಐಪಿಎಸ್‌ ಅಧಿಕಾರಿ ಕಿರಣ್‌ ಬೇಡಿ ಹಂಚಿಕೊಂಡ ವಿಡಿಯೊಗೆ ಟ್ವೀಟಿಗರು ವ್ಯಂಗ್ಯದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಈಗಾಗಲೇ 7,900ಕ್ಕೂ ಹೆಚ್ಚು ಬಾರಿ ಮರುಹಂಚಿಕೆಯಾಗಿ 8,000ಕ್ಕೂ ಅಧಿಕ ಪ್ರತಿಕ್ರಿಯೆಗಳು ದಾಖಲಾಗಿವೆ.

ಯಾವುದೇ ಬರಹಗಳಿಲ್ಲದೆ'ಸೂರ್ಯನ ಓಂಕಾರ'ದ ವಿಡಿಯೊ ಹಂಚಿಕೊಂಡಿರುವ ಕಿರಣ್‌ ಬೇಡಿ ಅವರಿಗೆ ಇದೊಂದು ಫೇಕ್‌ ವಿಡಿಯೊ ಎಂದು ಹಲವು ಟ್ವೀಟಿಗರು ತಿಳಿಸಿದ್ದಾರೆ. ಇನ್ನೂ ಕೆಲವರು ಸಿನಿಮಾ ತುಣುಗಳು, ಪೋಸ್ಟರ್‌, ಫೋಟೊಗಳ ಮೂಲಕ ಕಾಲೆಳೆದಿದ್ದಾರೆ.

ಸೂರ್ಯನ ವಾತಾವರಣದಲ್ಲಿ ಉಂಟಾಗುತ್ತಿರುವ ಶಬ್ದಕ್ಕೆ ಸಂಬಂಧಿಸಿದಂತೆ ಒಂದು ಆಡಿಯೊ–ವಿಡಿಯೊ ರೆಕಾರ್ಡ್‌ನ್ನುನಾಸಾ 2018ರಲ್ಲಿ ಹಂಚಿಕೊಂಡಿತ್ತು.

'ಸೂರ್ಯ ನಿಶ್ಯಬ್ದಿಯಾಗಿಲ್ಲ. ತರಂಗಗಳಿಂದ ಹೊರಡುತ್ತಿರುವ ಸದ್ದು ಸೌರ ದ್ರವ್ಯದ ಸಂಚಾರವನ್ನು ತಿಳಿಸುತ್ತದೆ. ಇದು ಸೂರ್ಯನ ಒಳಭಾಗದ ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಸಹಕಾರಿಯಾಗುತ್ತದೆ' ಎಂದು ಟ್ವೀಟ್‌ನೊಂದಿಗೆ ಹಂಚಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT