ಬೆಕ್ಕು ಹಿಡಿಯಲು ಹೋಗಿ ಚಿರತೆಯೊಂದು ಬೆಕ್ಕಿನ ಜತೆಯಲ್ಲೇ ಬಾವಿಗೆ ಬಿದ್ದಿರುವ ಘಟನೆ ವರದಿಯಾಗಿದೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಈ ಘಟನೆ ನಡೆದಿದೆ.
ಬಾವಿಯಲ್ಲಿ ಬೆಕ್ಕಿನ ವಿರುದ್ಧ ದಾಳಿಗೆ ಚಿರತೆ ಮುಂದಾಯಿತಾದರೂ ಮಾರ್ಜಾಲದ ಮೋಡಿಗೆ ಚಿರತೆ ಮನಸೋತಿತು. ನಂತರ ಕೆಲಹೊತ್ತು ಈ ಎರಡು ಪ್ರಾಣಿಗಳು ಗೆಳೆಯರಂತೆ ಬೀಗಿದವು.
ಚಿರತೆ ಮತ್ತು ಬೆಕ್ಕು ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಇಲಾಖೆ ಸಿಬ್ಬಂದಿಗಳು ಚಿರತೆ ಮತ್ತು ಬೆಕ್ಕನ್ನು ರಕ್ಷಣೆ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.