ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಕೋಣಗಳ ದಾಳಿಗೆ ಕಂಗೆಟ್ಟು ಮರ ಏರಿದ ಸಿಂಹ: ವಿಡಿಯೊ ವೈರಲ್

Last Updated 14 ಮಾರ್ಚ್ 2022, 11:12 IST
ಅಕ್ಷರ ಗಾತ್ರ

ಬೆಂಗಳೂರು: ಸಿಂಹ ಸಹಜವಾಗಿ ಅತ್ಯಂತ ಆಕ್ರಮಣಶೀಲ ಹಾಗೂ ಯಾವ ಪ್ರಾಣಿಗೂ ಹೆದರದ ಪ್ರಾಣಿ ಎಂದು ಕರೆಸಿಕೊಳ್ಳುತ್ತದೆ. ಆದರೆ, ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಉಕ್ತಿಯಂತೆ ಪ್ರಾಣಿಗಳು ಒಟ್ಟಾದರೇ ಸಿಂಹವನ್ನೂ ಹೆದರಿಸಬಹುದು ಎಂಬುದು ಅನೇಕ ಸಾರಿ ಸಾಬೀತಾಗಿದೆ.

ಕಾಡೆಮ್ಮ. ಕಾಡು ಕೋಣಗಳ ಮೇಲೆ ದಾಳಿ ಮಾಡಲು ಹೋದ ಸಿಂಹವೊಂದು ಅವುಗಳು ಒಟ್ಟಾಗಿ ಬಂದದ್ದನ್ನು ನೋಡಿ ಪ್ರಾಣ ಉಳಿಸಿಕೊಳ್ಳಲು ಮರವೇರಲು ಪ್ರಯತ್ನಿಸಿರುವ ಘಟನೆ ದಕ್ಷಿಣ ಆಫ್ರಿಕಾದ ಕ್ರೌಗರ್ ನ್ಯಾಷನಲ್ ಪಾರ್ಕ್‌ನಲ್ಲಿ ಇತ್ತೀಚೆಗೆ ನಡೆದಿದೆ ಎನ್ನಲಾಗಿದೆ.

ವೈಲ್ಡ್ ಅನಿಮಲ್ ಶಾರ್ಟ್ಸ್ ಎನ್ನುವ ಇನ್ಸ್ಟಾಗ್ರಾಂ ತಾಣ ಈ ವಿಡಿಯೊ ಹಂಚಿಕೊಂಡಿದ್ದು, ಸಾವಿರಾರು ಜನ ಲೈಕ್ ಮಾಡಿದ್ದಾರೆ. ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಆದರೆ, ಈ ಘಟನೆ ನಿರ್ಧಿಷ್ಟವಾಗಿ ಯಾವಾಗ ನಡೆದಿದ್ದು ಎನ್ನುವುದನ್ನು ಅವರು ಹಂಚಿಕೊಂಡಿಲ್ಲ.

ಕಾಡೆಮ್ಮೆ, ಕಾಡುಕೋಣಗಳಿಗೆ ಸಿಂಹಹೆದರಿ ಮರ ಏರುತ್ತಿರುವುದು ತಮಾಷೆಯಾಗಿ ಕಂಡರೂ ಒಗ್ಗಟ್ಟಿನಿಂದ ಇದ್ದರೇ ಎಂತಹ ಕಷ್ಟವನ್ನೂ ಎದುರಿಸಬಹುದು ಎಂದು ಈ ವಿಡಿಯೊ ತೋರಿಸಿಕೊಡುತ್ತದೆ ಎಂದು ಅನೇಕ ನೆಟ್ಟಿಗರು ಕಮೆಂಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT