ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8.97 ಕೆ.ಜಿ ತೂಕದ ಈರುಳ್ಳಿ ಬೆಳೆದು ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ ವ್ಯಕ್ತಿ

Published 2 ಅಕ್ಟೋಬರ್ 2023, 6:48 IST
Last Updated 2 ಅಕ್ಟೋಬರ್ 2023, 8:22 IST
ಅಕ್ಷರ ಗಾತ್ರ

ಸೇಂಟ್‌ ಪೀಟರ್‌ ಬರ್ಗ್‌: ವ್ಯಕ್ತಿಯೊಬ್ಬರು ತೋಟದಲ್ಲಿ 8.97 ಕೆ.ಜಿ ತೂಕದ ಈರುಳ್ಳಿ ಬೆಳೆದು ಗಿನ್ನಿಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಗುರ್ನಸಿ ದೇಶದ ಗರೆಥ್ ಗ್ರಿಫಿನ್ ಎನ್ನುವವರು ಈ ಈರುಳ್ಳಿಯನ್ನು ಬೆಳೆದಿದ್ದಾರೆ.

ಸೆಪ್ಟೆಂಬರ್‌ 15 ರಂದು ಉತ್ತರ ಯಾರ್ಕ್‌ಷೈರ್‌ನಲ್ಲಿ ಹಾರೊಗೇಟ್ ಶರತ್‌ಕಾಲದ ಹೂವಿನ ಪ್ರದರ್ಶನದ ವೇಳೆ ಈರುಳ್ಳಿಯನ್ನು ಪ್ರದರ್ಶನಕ್ಕೆ ಇರಿಸಿದ್ದಾರೆ. ಇದು ಗಿನ್ನಿಸ್‌ ವಿಶ್ವ ದಾಖಲೆ ಪಟ್ಟಿ ಸೇರಿದೆ.

2014ರಲ್ಲಿ 8.5 ಕೆ.ಜಿ ತೂಕದ ಈರುಳ್ಳಿ ವಿಶ್ವ ದಾಖಲೆ ನಿರ್ಮಿಸಿತ್ತು. ಈ ದಾಖಲೆಯನ್ನು ಗರೆಥ್‌ ಅವರು ಬೆಳೆದ ಈರುಳ್ಳಿ ಮುರಿದಿದೆ.

ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈರುಳ್ಳಿಯು ಬೌಲಿಂಗ್‌ ಬಾಲ್‌ಗಿಂತ ಹೆಚ್ಚು ಭಾರವಿದೆ! ಎಂದು ಕ್ಯಾಪ್ಶನ್‌ ನೀಡಲಾಗಿದೆ.

ಈ ಕುರಿತು ಗ್ರಿಫಿನ್ ಗಿನ್ನಿಸ್‌ ವರ್ಲ್ಡ್ ರೆಕಾರ್ಡ್ಸ್‌ನೊಂದಿಗೆ ಮಾತನಾಡಿ, ‘ನಾನು ಪ್ರಪಂಚದ ಅತಿದೊಡ್ಡ ಈರುಳ್ಳಿಯನ್ನು ಬೆಳೆದಿರುವುದು ಸಂತಸ ನೀಡಿದೆ. ನನ್ನ ತಂದೆ ಅವರು ಅನೇಕ ವರ್ಷಗಳವರೆಗೆ ದೈತ್ಯ ಈರುಳ್ಳಿಯನ್ನು ಬೆಳೆದಿದ್ದರು, ಆದರೆ ಅವರು ಬೆಳೆದುದರಲ್ಲಿ ಅತಿ ಹೆಚ್ಚು ತೂಕದ ಈರುಳ್ಳಿ ಎಂದರೆ 3.5 ಕೆ.ಜಿ ತೂಕವಿತ್ತು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT