ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಐಫೋನ್‌ ರಿಂಗ್‌ಟೋನ್‌ ಅನುಕರಿಸುವ ಗಿಳಿ ಮರಿ 'ಗೂಸ್ಸಿ ಗೌಡ'

Last Updated 19 ಜನವರಿ 2022, 5:19 IST
ಅಕ್ಷರ ಗಾತ್ರ

ಬೆಂಗಳೂರು: ಗಿಳಿ ಮರಿಯೊಂದು ಐಫೋನ್‌ ರಿಂಗ್‌ಟೋನ್‌ ಅನುಕರಿಸುವ ಮೂಲಕ ಗಮನ ಸೆಳೆದಿದೆ. ವಾಸ್‌ಮೇರಿ ಇಲೆಕ್ಟಸ್‌ (vosmaeri eclectus) ಜಾತಿಗೆ ಸೇರಿದ ಗಿಳಿ ಮರಿ ಇದಾಗಿದ್ದು, 'ಗೂಸ್ಸಿಗೌಡ' ಎಂದು ಹೆಸರಿಡಲಾಗಿದೆ.

ಮೈಸೂರಿನ ಪೂಜಾ ದೇವರಾಜ್‌ ಮತ್ತು ಹರ್ಷಿತಾ ಅವರು ಸಾಕಿಕೊಂಡಿರುವ ಗಿಳಿಗೆ ಪ್ರತ್ಯೇಕ ಇನ್‌ಸ್ಟಾಗ್ರಾಮ್‌ ಖಾತೆ ಕೂಡ ಇದೆ.

ಆಗಸ್ಟ್‌ 10, 2020ರಂದು ಗೂಸ್ಸಿಗೌಡ ಜನಿಸಿರುವುದಾಗಿ ಉಲ್ಲೇಖಿಸಿದ್ದಾರೆ. 'ವೈರಲ್‌ಹಾಗ್‌' ಪೇಜ್‌ನಲ್ಲಿ ಐಫೋನ್‌ ರಿಂಗ್‌ಟೋನ್‌ ಅನುಕರಣೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈಗಾಗಲೇ 22 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಸಾಮಾನ್ಯವಾಗಿ ಈ ಜಾತಿಯ ಗಿಳಿಗಳು ಮಾತನಾಡುವಲ್ಲಿ ಮತ್ತು ಅನುಕರಣೆ ಮಾಡುವಲ್ಲಿ ಪ್ರಸಿದ್ಧಿ ಪಡೆದಿವೆ.

ಇಂಡೋನೇಷ್ಯಾದ ಉತ್ತರ ಮೊಲುಕಸ್‌ ದ್ವೀಪಗಳಲ್ಲಿ ಈ ಗಿಳಿಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಈ ಗಿಳಿಗಳು ಸುಮಾರು 40 ವರ್ಷಗಳ ಕಾಲ ಬದುಕಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT