ಬುಧವಾರ, ಡಿಸೆಂಬರ್ 7, 2022
21 °C

ವಿಡಿಯೊ ನೋಡಿ: ಕದ್ದು ಬಿಯರ್ ಕುಡಿದ ಕೋತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯ್ ಬರೇಲಿ: ಚಿತ್ರ ವಿಚಿತ್ರ ವರ್ತನೆಗೆ ಹೆಸರಾಗಿರುವ ಮಂಗಗಳು ಮನುಷ್ಯನ ಆಹಾರ ಪಾನೀಯದ ಮೇಲೆ ಸದಾ ಒಂದು ಕಣ್ಣನ್ನು ಇಟ್ಟಿರುತ್ತದೆ. ಮನುಷ್ಯನ ಬಳಿ ಏನೇ ಸಿಕ್ಕರೂ ಚಂಗನೇ ಕಸಿದುಕೊಂಡು ತಿಂದು ಬಿಡುತ್ತದೆ.

ಇದೇ ರೀತಿ ಇಲ್ಲೊಂದು ಕೋತಿ ಬಿಯರ್ ಕುಡಿಯಲು ಹಠ ಮಾಡುತ್ತದೆ. ಕೊಡದಿದ್ದರೇ ಕದ್ದು ಕುಡಿಯುತ್ತದೆ.

ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಇಂತಹದೊಂದು ಕೋತಿಯಿದೆ. ಇದಕ್ಕೆ ಬಿಯರ್ ಕುಡಿಯುವ ಚಟವಿದ್ದು ಹೊಂಚು ಹಾಕಿ ಬಿಯರ್ ಕುಡಿಯುತ್ತದೆ. ಆದರೆ, ಇತ್ತೀಚೆಗೆ ಒಂದು ದಿನ ಬಿಯರ್ ಸಿಗದಿದ್ದಾಗ ಬಾರ್ ಒಂದರಲ್ಲಿ ಒಳ ಹೊಕ್ಕು ಕದ್ದು ಬಿಯರ್ ಕುಡಿದಿದೆ. ಅಷ್ಟೇ ಅಲ್ಲದೇ ಬಿಯರ್ ಬಾಟಲ್ ಜೊತೆ ಆಟವಾಡಿದೆ.

ಇದಕ್ಕೆ ಸಂಬಂದಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವಾರು ನೆಟ್ಟಿಗರು ಇದೊಂದು ಬಿಯರ್ ಪ್ರಿಯ ಕೋತಿ ಎಂದು ತಮಾಷೆ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು