ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಲ್ಲಿರುವ ಪತ್ನಿ ಕುಲ್ಸೂಮ್ ಜತೆ ಷರೀಫ್ ಮಾತನಾಡುತ್ತಿರುವ ವಿಡಿಯೊ ವೈರಲ್

Last Updated 12 ಸೆಪ್ಟೆಂಬರ್ 2018, 4:27 IST
ಅಕ್ಷರ ಗಾತ್ರ

ಲಾಹೋರ್: ಜೈಲು ಶಿಕ್ಷೆ ಅನುಭವಿಸುವುದಕ್ಕಾಗಿ ಲಂಡನ್‍ನಿಂದ ಪಾಕಿಸ್ತಾನಕ್ಕೆ ಹೊರಟು ಬರುವ ಮುನ್ನ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಪತ್ನಿ ಬೇಗಂ ಕುಲ್ಸೂಮ್ ಜತೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಮಾತನಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕುಲ್ಸೂಮ್‌ ಅವರು 2014ರ ಜೂನ್‌ನಿಂದ ಲಂಡನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಕ್ಷೀಣಿಸಿದ ಕಾರಣ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿತ್ತು. ಸೋಮವಾರ ಶ್ವಾಸಕೋಶದ ಸಮಸ್ಯೆ ಉಲ್ಬಣಿಸಿತ್ತು ಎಂದು ಜಿಯೊ ಟಿವಿ ವರದಿ ಮಾಡಿದೆ. ಕುಲ್ಸೂಮ್‌ ಅವರಿಗೆ ಗಂಟಲು ಕ್ಯಾನ್ಸರ್‌ ಇರುವ ಬಗ್ಗೆ 2017ರ ಆಗಸ್ಟ್‌ನಲ್ಲಿ ಗೊತ್ತಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬೇಗಂ ಕುಲ್ಸೂಮ್‌ (68) ಮಂಗಳವಾರ ನಿಧನರಾಗಿದ್ದಾರೆ.

ಲಂಡನ್‍ನ ಹಾರ್ಲಿ ಸ್ಟ್ರೀಟ್ಕ್ಲಿನಿಕ್‍ನಲ್ಲಿ ಜುಲೈ 12ರಂದು ಚಿತ್ರೀಕರಿಸಿದ ವಿಡಿಯೊ ಇದಾಗಿದೆ. ಷರೀಫ್ ಅವರು ಕುಲ್ಸೂಮ್‌ ಹಾಸಿಗೆ ಪಕ್ಕದಲ್ಲಿ ನಿಂತು, ಕಣ್ಣು ತೆರೆಯಿರಿ ಕುಲ್ಸೂಮ್, ಕಣ್ಣು ತೆರೆಯಿರಿ ಕುಲ್ಸೂಮ್..ಬಾವೂಜಿ...ಅಲ್ಲಾಹು ನಿಮಗೆ ಆರೋಗ್ಯ ನೀಡಲಿ, ಅಲ್ಲಾಹು ನಿಮಗೆ ಸಾಮರ್ಥ್ಯ ನೀಡಲಿ ಎಂದು ಉರ್ದು ಭಾಷೆಯಲ್ಲಿ ಹೇಳುತ್ತಿರುವ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.

ಇಷ್ಟು ಮಾತನಾಡಿದಾಗ ಕುಲ್ಸೂಮ್ ಕೆಲವು ಸೆಕೆಂಡುಗಳ ಕಾಲ ಕಣ್ಣು ತೆರೆದು ನೋಡಿದ್ದರು.ಆ ಅವಸ್ಥೆಯಲ್ಲಿ ಎಲ್ಲಾ ಭಾರವನ್ನು ದೇವರ ಮೇಲೆ ಹಾಕಿ ನಾನು ವಾಪಸ್ ಬರಬೇಕಾಗಿ ಬಂತು ಎಂದು ಷರೀಫ್ ಅಂದು ಹೇಳಿದ್ದರು.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT