ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಂಗರ್‌ಗೆ ಮೊಬೈಲ್ ನೇತು ಹಾಕಿ ಆನ್‌ಲೈನ್‌ ಪಾಠ ಮಾಡಿದ ಶಿಕ್ಷಕಿ

Last Updated 11 ಜೂನ್ 2020, 14:15 IST
ಅಕ್ಷರ ಗಾತ್ರ

ಕೊರೊನಾ ಲಾಕ್‌ಡೌನ್‌ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಮನೆಯಿಂದಲೇ ಆನ್‌ಲೈನ್‌ನಲ್ಲಿ ಪಾಠ ಮಾಡಲು ಪುಣೆಯ ವಿಜ್ಞಾನ ‌ಶಿಕ್ಷಕಿಯೊಬ್ಬರು ಕಂಡುಕೊಂಡ ವಿಚಿತ್ರ ವಿಧಾನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಆನ್‌ಲೈನ್‌ ಕ್ಲಾಸ್‌ಗೆ ಅಗತ್ಯ ಮೂಲಸೌಕರ್ಯ ಮತ್ತು ಸಲಕರಣೆ ಇಲ್ಲದ ಕಾರಣ ಪುಣೆಯ ರಾಸಾಯನ ವಿಜ್ಞಾನ ಶಿಕ್ಷಕಿ ಮೌಮಿತಾ ಬಿ. ಮನೆಯಲ್ಲಿಯ ವಸ್ತುಗಳಿಂದಲೇ ಪರಿಹಾರ ಕಂಡುಕೊಂಡಿದ್ದಾರೆ.

ಮೊಬೈಲ್‌ ಫೋನ್‌ ಇಡಲು ಟ್ರೈಪಾಡ್‌ ಇಲ್ಲದ ಕಾರಣ ಬಟ್ಟೆಗಳನ್ನು ನೇತು ಹಾಕುವ ಹ್ಯಾಂಗರ್‌ಗೆ ಮೊಬೈಲ್‌ ಕಟ್ಟಿದ್ದಾರೆ. ಹ್ಯಾಂಗರ್‌ ಅನ್ನುಜೋಕಾಲಿ ರೀತಿ ಬಟ್ಟೆಯ ತುಂಡುಗಳಿಂದ ಛತ್ತಿಗೆ ಕಟ್ಟಿ ತಲೆಕೆಳಗಾಗಿ ಇಳಿಬಿಟ್ಟಿದ್ದಾರೆ. ಹ್ಯಾಂಗರ್‌ ಅಲುಗಾಡದಂತೆ ಕುರ್ಚಿಗಳಿಗೆ ಬಿಗಿಯಾಗಿ ಕಟ್ಟಿದ್ದಾರೆ. ಟ್ರೈಪಾಡ್‌ ಇಲ್ಲದಿದ್ದರೂ ಮೊಬೈಲ್‌ ಒಂದಿಂಚೂ ಆಚೀಚೆ ಸರಿದಾಡಲ್ಲ. ವಿದ್ಯಾರ್ಥಿಗಳಿಗೆ ಬೋರ್ಡ್‌ ಸ್ಪಷ್ಟವಾಗಿ ಗೋಚರಿಸುತ್ತದೆ.

ಟ್ರೈಪಾಡ್‌ ಇಲ್ಲದಿದ್ದರೂ ಆ ಕೊರತೆಯನ್ನು ಮೆಟ್ಟಿನಿಂತು ಮನೆಯಲ್ಲಿಯೇ ಪರಿಹಾರ ಕಂಡುಕೊಂಡ ಶಿಕ್ಷಕಿಯ ಈ ಐಡಿಯಾ ಎಲ್ಲರ ಮೆಚ್ಚುಗೆ ಗಳಿಸಿದೆ. ಶಿಕ್ಷಕಿ ತಮ್ಮ ಲಿಂಕ್ಡ್‌ಇನ್‌ ಖಾತೆಯಲ್ಲಿ(https://www.linkedin.com/posts/activity-6673482722440302592-YTWY) ವಿಡಿಯೊ ಹಂಚಿಕೊಂಡಿದ್ದು, ಇದನ್ನು ಎರಡು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 600 ಜನರು ಈ ವಿಧಾನ ಮೆಚ್ಚಿಕೊಂಡು ಕಮೆಂಟ್‌ ಹಾಕಿದ್ದಾರೆ.

ವಿಡಿಯೊದ ಸ್ಕ್ರೀನ್‌ಶಾಟ್‌ ಎರಡು ದಿನಗಳಿಂದ ಟ್ವಿಟ್ಟರ್‌ನಲ್ಲಿ ವೈರಲ್‌ ಆಗಿದೆ. ಮಕ್ಕಳಿಗೆ ಪಾಠ ಮಾಡುವ ಛಲದಿಂದ ಶಿಕ್ಷಕಿ ಸವಾಲುಗಳನ್ನು ಮೆಟ್ಟಿನಿಂತ ರೀತಿಗೆ ಶಹಬ್ಬಾಸ್ ಹೇಳಿದ್ದಾರೆ. ಆಧುನಿಕ ಸಾಧನ, ಸಲಕರಣೆಗಳ ಕೊರತೆಯ ಹೊರತಾಗಿಯೂ ರಾಸಾಯನ ವಿಜ್ಞಾನ ಶಿಕ್ಷಕಿಯು ಪರ್ಯಾಯ ಮಾರ್ಗ ಕಂಡಕೊಂಡುತಂತ್ರಜ್ಞಾನ ಬಳಸಿಕೊಂಡ ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT