ಗುರುವಾರ , ಏಪ್ರಿಲ್ 2, 2020
19 °C

ಬಹುಮಹಡಿ ವಸತಿ ಸಮುಚ್ಛಯದಿಂದ ಬೀಳುತ್ತಿದ್ದ ಮಗುವನ್ನು ಹಿಡಿದು ಕಾಪಾಡಿದ 'ದೇವರ' ಕೈ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಇಸ್ತಾಂಬುಲ್ (ಟರ್ಕಿ): ಬಹುಮಹಡಿ ವಸತಿ ಸಮುಚ್ಛಯದ ಕಿಟಿಕಿಯೊಂದರಿಂದ ಕೆಳಗೆ ಬೀಳುತ್ತಿದ್ದ  ಹೆಣ್ಣು ಮಗುವೊಂದನ್ನು ರಸ್ತೆಯಲ್ಲಿ ನಿಂತಿದ್ದ ಯುವಕನೊಬ್ಬ ಕ್ಯಾಚ್ ಹಿಡಿದು ರಕ್ಷಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಇಸ್ತಾಂಬುಲ್ ಫತೀಹಾ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದೋಹಾ ಮೊಹಮ್ಮದ್ ಎಂಬ ಮಗು ಕಟ್ಟಡದ ಎರಡನೇ ಮಹಡಿಯಿಂದ ಬೀಳುತ್ತಿರುವುದನ್ನು ಗಮನಿಸಿದ 17ರ ಹರೆಯದ ಫೆವುಜಿ ಜಬಾತ್  ಸುರಕ್ಷಿತವಾಗಿ ಕ್ಯಾಚ್ ಹಿಡಿದಿದ್ದಾರೆ. ಜಬಾತ್ ಮಗುವನ್ನು ಹಿಡಿದು ರಕ್ಷಿಸಿದಾಗಲೇ ಅಕ್ಕಪಕ್ಕದವರಿಗೆ ವಿಷಯ ಗೊತ್ತಾಗಿದ್ದು.

ನಾನು ಆ ಕ್ಷಣಕ್ಕೆ ಏನು ಮಾಡಬೇಕೋ ಅದನ್ನು ಮಾಡಿದೆ, ಇದೆಲ್ಲ ದೇವರ ಕೃಪೆ ಅಂತಾರೆ ಜಬಾತ್.

ಸ್ಥಳೀಯ ಮಾಧ್ಯಮಗಳ ಪ್ರಕಾರ ದೋಹಾ ಕಿಟಿಕಿಯಿಂದ ಹೊರಗೆ ಇಣುಕಿದಾಗ ಬಿದ್ದಿದ್ದಾಳೆ. ಈ ಹೊತ್ತಲ್ಲಿ ಆಕೆಯ ಅಮ್ಮ ಅಡುಗೆ ಮನೆಯಲ್ಲಿದ್ದರು.

ಮಗಳನ್ನು ರಕ್ಷಿಸಿದ್ದಕ್ಕೆ ದೋಹಾ ಅವರ ಕುಟುಂಬ ಜಬಾತ್‌ನ್ನು ಅಭಿನಂದಿಸಿದ್ದು, 200 ಟರ್ಕಿಶ್ ಲಿರಾ (50 ಡಾಲರ್) ಹಣವನ್ನು ಬಹುಮಾನವಾಗಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು