ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಆಪರೇಷನ್ ಥಿಯೇಟರ್ ಒಳಗೆ ನುಗ್ಗಿದ ಕೋತಿ!

ದೆಹಲಿಯ ರಾಮ್ ಮನೋಹರ ಲೂಹಿಯಾ ಆಸ್ಪತ್ರೆಯಲ್ಲಿ (RML) ನಡೆದಿದೆ.
Published 10 ಸೆಪ್ಟೆಂಬರ್ 2023, 14:30 IST
Last Updated 10 ಸೆಪ್ಟೆಂಬರ್ 2023, 14:30 IST
ಅಕ್ಷರ ಗಾತ್ರ

ಬೆಂಗಳೂರು: ಕೋತಿಯೊಂದು ಆಸ್ಪತ್ರೆಯ ಆಪರೇಷನ್ ಥಿಯೇಟರ್ ಒಳಗೆ ನುಗ್ಗಿರುವ ಘಟನೆ ದೆಹಲಿಯ ರಾಮ್ ಮನೋಹರ ಲೂಹಿಯಾ ಆಸ್ಪತ್ರೆಯಲ್ಲಿ (RML) ನಡೆದಿದೆ.

ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.

ವಯಸ್ಕ ಕೋತಿ ಆಸ್ಪತ್ರೆಯ ನ್ಯುರೋಸರ್ಜರಿ ಆಪರೇಷನ್ ಥಿಯೇಟರ್ ಒಳಗೆ ನುಗ್ಗಿದ್ದ ವೇಳೆ ಅದೃಷ್ಠವಶಾತ್ ಸಿಬ್ಬಂದಿ ತಕ್ಷಣವೇ ಅದನ್ನು ನೋಡಿ ಕೋಲಿನಿಂದ ಓಡಿಸಿದ್ದಾರೆ. ಕೋತಿ ಆಗ ಹೊರಗೆ ಓಡಿ ಹೋಗಿದೆ.

ದೆಹಲಿಯಲ್ಲಿ ನಡೆಯುತ್ತಿದ್ದ ಜಿ20 ಸಮಾವೇಶದ ಪ್ರಾಂಗಣದ ಬಳಿ ಕೋತಿಗಳು ನುಗ್ಗದಂತೆ ತಡೆಯಲು ಮಂಗಗಳನ್ನು ಹಿಡಿಯುವವರು ಹೋಗಿರುವುದರಿಂದ, ಆಸ್ಪತ್ರೆಯ ಬಳಿ ಉಪಟಳ ಇಡುತ್ತಿರುವ ಮಂಗಗಳನ್ನು ಹಿಡಿಯಲು ಸಮಸ್ಯೆ ಆಗಿದೆ. ಹೀಗಾಗಿ ಮಂಗ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಒಳಗೆ ನುಗ್ಗಿದೆ ಎಂದು ಆರ್‌ಎಂಎಲ್ ಆಸ್ಪತ್ರೆಯ ಅಧೀಕ್ಷಕರು ತಿಳಿಸಿರುವುದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT