ಗುರುವಾರ , ಏಪ್ರಿಲ್ 2, 2020
19 °C
ಚೀನಾ

ಸೇತುವೆ ಕೆಳಗೆ ಸಿಲುಕಿದ ವಿಮಾನ: ವಿಡಿಯೊ ವೈರಲ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸೇತುವೆ ಕೆಳಗೆ ಸಿಲುಕಿರುವ ವಿಮಾನ

ಪ್ರಯಾಣಿಕರನ್ನು ಹೊತ್ತು ಆಗಸದಲ್ಲಿ ಮೋಡಗಳನ್ನು ಸೀಳಿ ಮೇಲೆ ಹಾರುತ್ತ ಸಾಗುವ ವಿಮಾನ ಸೇತುವೆಯ ಕೆಳಗೆ ಸಿಲುಕುವುದೆಂದರೆ?! ಇಂಥದೊಂದು ವಿಚಿತ್ರ ಘಟನೆ ಚೀನಾದ ಹಾರ್ಬಿನ್‌ನಲ್ಲಿ ನಡೆದಿದೆ. ಹಿಂದೆ–ಮುಂದೆ ಸಾಗದೆ ವಿಮಾನ ಸೇತುವೆ ಕೆಳಗೆ ಸಿಲುಕಿಕೊಂಡಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. 

ವಿಮಾನದ ಭಾಗಗಳನ್ನು ಬೇರ್ಪಡಿಸಿ ಉದ್ದನೆಯ ಟ್ರಕ್‌ ಮೂಲಕ ಸಾಗಿಸುವ ಸಮಯದಲ್ಲಿ ಸೇತುವೆಯ ಕೆಳಗೆ ವಿಮಾನ ಸಿಲುಕಿದೆ ಎಂದು ನ್ಯೂ ಚೈನಾ ಟಿವಿ ವರದಿ ಮಾಡಿದೆ. ಮೇಲ್ಸೇತುವೆ ಅಡಿಯಲ್ಲಿ ವಿಮಾನದ ಮುಖ್ಯಭಾಗವು ಅಲುಗಾಡಂತೆ ಸಿಲುಕಿದೆ. ಇದರಿಂದ ಬಿಡಿಸಿಕೊಂಡು ಮುಂದೆ ಸಾಗುವುದು ಬಗೆ ಹೇಗೆ ಎಂದು ಹಲವು ಜನರು ಅತ್ತಿತ್ತ ಓಡಾಡುವುದನ್ನು ವಿಡಿಯೊದಲ್ಲಿ ಕಾಣಬಹುದು. 

ಎರಡು ದಿನಗಳ ಹಿಂದೆ ಅಪ್‌ಲೋಡ್‌ ಆಗಿರುವ ವಿಡಿಯೊ ಟ್ವಿಟರ್‌, ಯುಟ್ಯೂಬ್‌ಗಳಲ್ಲಿ ಸಾವಿರಾರು ವೀಕ್ಷಣೆ ಕಂಡಿರುವ ವಿಡಿಯೊ ವೀಬೊದಂತಹ ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ವಿಡಿಯೊ ಸಾಕಷ್ಟು ಕಾಮೆಂಟ್‌ಗಳನ್ನು ಪಡೆದಿದೆ. 

ಟ್ರಕ್‌ನ ಚಾಲಕ ಟ್ರಕ್‌ ಟೈರ್‌ಗಳ ಗಾಳಿ ಹೊರತೆಗೆಯುವ ಮೂಲಕ ಎತ್ತರವನ್ನು ತಗ್ಗಿಸುವ ಉಪಾಯ ಮಾಡಿದ್ದಾನೆ. ಸೇತುವೆಯಿಂದ ಸ್ವಲ್ಪ ಅಂತರ ಸಾಧ್ಯವಾಗುತ್ತಿದ್ದಂತೆ ವಿಮಾನದ ಸಹಿತ ಟ್ರಕ್‌ನ್ನು ಮುಂದೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ನ್ಯೂ ಚೈನಾ ಟಿವಿ ವರದಿ ಮಾಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು