ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ | ವರನಿಗೆ ಕೋವಿಡ್‌: ಪಿಪಿಇ ಕಿಟ್‌ ಧರಿಸಿ ಸಪ್ತಪದಿ ತುಳಿದ ಜೋಡಿ

Last Updated 27 ಏಪ್ರಿಲ್ 2021, 7:56 IST
ಅಕ್ಷರ ಗಾತ್ರ

ಭೋಪಾಲ್‌: ವರನಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದರಿಂದ ವಧು ವರರು ಪಿಪಿಇ ಕಿಟ್ ಧರಿಸಿ ವಿವಾಹವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ರತ್ಲಮ್ನಲ್ಲಿ ಈ ವಿಶೇಷ ಮದುವೆ ನಡೆದಿದೆ, ವಿವಾಹ ಮಾಡಿಸುವ ಹಿರಿಯರು ಕೂಡ ಪಿಪಿಇ ಕಿಟ್‌ ಧರಿಸಿದ್ದರು. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮದುವೆ ನಡೆಯಲು ಇನ್ನು ಎರಡು ದಿನ ಬಾಕಿ ಇರುವಾಗ ವರನಿಗೆ ಕೋವಿಡ್‌ ಸೋಂಕು ದೃಢಪಟ್ಟಿತ್ತು. ನಿಗದಿತ ದಿನದಂದೇ ಮದುವೆ ನಡೆಯಬೇಕಿತ್ತು. ಈ ವೇಳೆ ವಧು ವರರ ಸಂಬಂಧಿಗಳು ಸ್ಥಳೀಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಪಿಪಿಇ ಕಿಟ್‌ ಧರಿಸಿ ವಿವಾಹ ನಡೆಸುವಂತೆ ಸಲಹೆ ಕೊಟ್ಟರು ಎಂದು ವರನ ಸಂಬಂಧಿಕರು ತಿಳಿಸಿದ್ದಾರೆ.

ವಿವಾಹ ನೆರವೇರಿಸುವ ಹಿರಿಯರು ಕೂಡ ಪಿಪಿಇ ಕಿಟ್ಟ ಧರಿಸಿದ್ದರು. ಸಂಪ್ರದಾಯದಂತೆ ಅಗ್ನಿಕುಂಡ ಸುತ್ತಿ, ಮಂತ್ರಗಳನ್ನು ಹೇಳುವ ಮೂಲಕ ಸಪ್ತಪದಿ ತುಳಿಸಲಾಯಿತು ಎಂದು ವರನ ಸಹೋದರ ತಿಳಿಸಿದ್ದಾರೆ.

ಸರ್ಕಾರದ ಮಾರ್ಗಸೂಚಿಯಂತೆ ವಿವಾಹ ನೆರವೇರಿಸಲಾಯಿತು ಎಂದು ಸ್ಥಳೀಯ ನೊಡೆಲ್‌ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT