ಬುಧವಾರ, ಏಪ್ರಿಲ್ 8, 2020
19 °C

ವಿಡಿಯೊ | ಕೋತಿಗಳ ಮುಂದೆ ಕರಡಿ ವೇಷದಲ್ಲಿ ಬಂದ ಐಟಿಬಿಪಿ ಸಿಬ್ಬಂದಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕರಡಿ ವೇಷದಲ್ಲಿ ಐಟಿಬಿಪಿ ಸಿಬ್ಬಂದಿ

ಬೆಂಗಳೂರು: ಕೋತಿಗಳ ಹಾವಳಿ ತಪ್ಪಿಸಲು ಸಿಡಿಮದ್ದು ಸಿಡಿಸುವುದು, ಜೋರು ಸದ್ದು ಮಾಡಿ ಬೆದರಿಸುವುದು ಅಥವಾ ಬೆದುರು ಗೊಂಬೆಗಳನ್ನು ಕೂರಿಸುವ ತಂತ್ರ ಅನುಸರಿಸುವುದು ಸಾಮಾನ್ಯ. ಆದರೆ, ಇಂಡೊ ಟಿಬೆಟನ್‌ ಬಾರ್ಡರ್‌ ಫೋರ್ಸ್‌ (ಐಟಿಬಿಪಿ) ಸಿಬ್ಬಂದಿ ಕರಡಿ ವೇಷ ಧರಸಿ ಓಡಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದರ ವಿಡಿಯೊ ವೈರಲ್‌ ಆಗಿದೆ. 

ಉತ್ತರಾಖಂಡದ ಮಿರ್ಥಿ ಶಿಬಿರದ ಬಳಿ ಕೋತಿಗಳನ್ನು ಓಡಿಸಲು ಐಟಿಬಿಪಿಯ ಇಬ್ಬರು ಸಿಬ್ಬಂದಿ ಕರಡಿಯಂತೆ ವೇಷ ಧರಿಸಿ, ಕೋತಿಗಳ ಬೆನ್ನಟ್ಟಿ ಓಡಾಡುವುದನ್ನು ವಿಡಿಯೊದಲ್ಲಿ ಕಾಣಬಹುದು. 

ವೇಷಧಾರಿ ಸಿಬ್ಬಂದಿಗಳು ಹೆಜ್ಜೆ ಇಡುತ್ತಿದ್ದಂತೆ ಕೋತಿಗಳು ಬೆದರಿ, ಸಮೀಪದ ಕಾಡಿನೊಳಗೆ ಓಡಿವೆ. ಈ ವಿಡಿಯೊ ಟ್ವಿಟರ್‌ನಲ್ಲಿ ಸಾವಿರಾರು ವೀಕ್ಷಣೆ ಕಂಡಿದ್ದು, ನಗೆಬುಗ್ಗೆ ಹರಡಿದೆ.

ಕಾಡಿನ ಪ್ರದೇಶವನ್ನು ಅತಿಕ್ರಮಿಸಿಕೊಳ್ಳುತ್ತಿರುವ ಮನುಷ್ಯನ ಕಾರಣದಿಂದಲೇ ಪ್ರಾಣಿಗಳು ಆಹಾರಕ್ಕಾಗಿ ನಾಡಿನತ್ತ ಸಾಗುತ್ತಿವೆ. ಆನೆ, ಚಿರತೆ, ಕೋತಿಗಳು ಕಾಡಿನಿಂದ ಹೊರ ಬಂದು ಹಳ್ಳಿಗಳತ್ತ ನುಗ್ಗುತ್ತಿರುವ ಘಟನೆಗಳು ಕೆಲವು ವರ್ಷಗಳಿಂದ ಆಗಾಗ್ಗೆ ವರದಿಯಾಗುತ್ತಲೇ ಇವೆ.  

ಕಳೆದ ತಿಂಗಳು ಗುಜರಾತ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೈದಾನದಲ್ಲಿ ಏರ್‌ಪೋರ್ಟ್‌ ಸಿಬ್ಬಂದಿ ಕರಡಿ ವೇಷದಲ್ಲಿ ಓಡಾಡಿದ್ದರು. ಲಂಗೂರ್‌ಗಳ ದೊಡ್ಡ ಗುಂಪನ್ನು ಓಡಿಸಲು ಕರಡಿ ವೇಷ ಧರಿಸಿದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು