ಸೋಮವಾರ, ಜುಲೈ 4, 2022
22 °C

Viral Video: ವಾಹನ ಸಿಗದೇ ಮೃತದೇಹವನ್ನು ಮಂಚದಲ್ಲಿ ಹೊತ್ತು ಸಾಗಿದ ಮಹಿಳೆಯರು!

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ರೇವಾ: ಆಸ್ಪತ್ರೆಯಲ್ಲಿ ಮೃತಪಟ್ಟ ತಮ್ಮ ಸಂಬಂಧಿ ಮಹಿಳೆಯ ಮೃತದೇಹವನ್ಬು ಸಾಗಿಸಲು ಆ್ಯಂಬುಲೆನ್ಸ್ ಸಿಗದೆ, ನಾಲ್ವರು ಮಹಿಳೆಯರು ಮಂಚದಲ್ಲೇ ಹೊತ್ತುಕೊಂಡು ಹೋಗಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

ನಾಲ್ವರು ಮಹಿಳೆಯರು ಮೃತದೇಹವನ್ನು ಹೊತ್ತುಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲೆಯ ರಾಯ್‌ಪುರ್ ಎಂಬ ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಫಲಿಸದೇ ಮಹಿಳೆಯೊಬ್ಬರು ಕಳೆದ ಮಂಗಳವಾರ ಮೃತಪಟ್ಟಿದ್ದರು. ಅವರ ಮೃತದೇಹ ಸಾಗಿಸಲು ಸಂಬಂಧಿಕರು ಅಂಬುಲೆನ್ಸ್ ಕೇಳಿದರೂ ಆಸ್ಪತ್ರೆಯವರು ಒದಗಿಸಲಿಲ್ಲ ಎಂದು ಆರೋಪಿಸಲಾಗಿದೆ.

 

ಇದರಿಂದ ಮನನೊಂದ ಮೃತ ಸಂಬಂಧಿಯ ನಾಲ್ವರು ಮಹಿಳೆಯರು ಮೃತದೇಹವನ್ನು ಮಂಚದಲ್ಲಿ ಹೊತ್ತುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಾರೆ.

ಆದರೆ, ಮಹಿಳೆಯರ ಆರೋಪವನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ನಿರಾಕರಿಸಿದ್ದು, ‘ನಾವು ವಾಹನ ವ್ಯವಸ್ಥೆ ಮಾಡುತ್ತೇವೆ ಎಂದರೂ ಮಹಿಳೆಯರು ಮಂಚದಲ್ಲೇ  ಶವ ಸಾಗಿಸಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ಬಿ.ಎಲ್. ಮಿಶ್ರಾ ಹೇಳಿದ್ದಾರೆ.

ಈ ಕುರಿತು ಜಿಲ್ಲಾ ಆರೋಗ್ಯ ಕೇಂದ್ರ ವಿಚಾರಣೆ ನಡೆಸಿದ್ದು, ಗ್ರಾಮದಲ್ಲಿ ವಾಹನಗಳ ಕೊರತೆಯೇ ಈ ಸಮಸ್ಯೆಗೆ ಕಾರಣ ಎಂದು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು