ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6,300 ಅಡಿ ಎತ್ತರದಿಂದ ಕೆಳಗೆ ಬಿದ್ದ ಮಹಿಳೆಯರ ಕಥೆ ಮುಂದೆ ಏನಾಯಿತು? ಇಲ್ಲಿ ನೋಡಿ

ಅಕ್ಷರ ಗಾತ್ರ

ಮಾಸ್ಕೊ: 6,300 ಅಡಿ ಎತ್ತರದಲ್ಲಿ ಕಟ್ಟಿದ್ದ ಜೋಕಾಲಿಯಿಂದ ಕೆಳಗೆ ಬಿದ್ದ ಇಬ್ಬರು ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ವಿಸ್ಮಯಕಾರಿ ರೀತಿಯಲ್ಲಿ ಪಾರಾಗಿದ್ದಾರೆ.

ರಷ್ಯಾದ ರಿಪಬ್ಲಿಕ್ ಆಫ್ ಡಾಗೆಸ್ತಾನ್‌ನಲ್ಲಿರುವ ಸುಲಾಕ್ ಕ್ಯಾನ್ಯನ್ ಬಂಡೆಯ ಮೇಲಿನ ಜೋಕಾಲಿಯಲ್ಲಿ ಈ ಇಬ್ಬರು ಮಹಿಳೆಯರು ಜೀಕುತ್ತಿದ್ದರು. ಆ ಸಂದರ್ಭದಲ್ಲಿ ಜೋಕಾಲಿಯ ಸರಪಳಿಗಳಲ್ಲಿ ಸಮಸ್ಯೆ ಉಂಟಾಗಿ ಮಹಿಳೆಯರು ಕೆಳಗೆ ಬಿದ್ದಿದ್ದಾರೆ ಎಂದು ಡೈಲಿ ಮೇಲ್‌ ವರದಿ ಮಾಡಿದೆ.

ಅದೃಷ್ಟವಶಾತ್, ಬಂಡೆಯ ಅಂಚಿಗೆ ಸ್ವಲ್ಪ ದೂರದಲ್ಲಿರುವ ಮರವೊಂದರ ಕೊಂಬೆ ಮಹಿಳೆಯರ ಜೀವವನ್ನು ಉಳಿಸಿದೆ. ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಘಟನೆಯ ವಿಡಿಯೊ ತುಣುಕನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಮಹಿಳೆಯರು ಕೆಳಗೆ ಬೀಳುತ್ತಿರುವಂತೆ ಅಲ್ಲಿ ನೆರೆದಿದ್ದವರು ಆಘಾತದಿಂದ ಕಿರುಚುತ್ತಿರುವುದು ವೈರಲ್‌ ವಿಡಿಯೊದಲ್ಲಿ ಸೆರೆಯಾಗಿದೆ.

'ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವೈರಲ್‌ ವಿಡಿಯೊವನ್ನು ಇಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT