ಮಹಿಳಾ ಐಪಿಎಸ್ ಅಧಿಕಾರಿ ಜತೆ ಹೆಜ್ಜೆ ಹಾಕಿದ ಮಹಿಳಾ ಪೊಲೀಸರು: ವಿಡಿಯೊ ವೈರಲ್ 

ಬುಧವಾರ, ಏಪ್ರಿಲ್ 24, 2019
31 °C

ಮಹಿಳಾ ಐಪಿಎಸ್ ಅಧಿಕಾರಿ ಜತೆ ಹೆಜ್ಜೆ ಹಾಕಿದ ಮಹಿಳಾ ಪೊಲೀಸರು: ವಿಡಿಯೊ ವೈರಲ್ 

Published:
Updated:

 ದೆಹಲಿ:ಆಲ್ ವುಮೆನ್ ಸಂಪರ್ಕ್ ಸಭಾ ನೇತೃತ್ವದಲ್ಲಿ ನೈಋತ್ಯ ಜಿಲ್ಲಾ ಪೊಲೀಸ್ ಘಟಕದಲ್ಲಿರುವ ಪೊಲೀಸರಿಗಾಗಿ ಆಯೋಜಿಸಿದ ಸುನೋ ಸಹೇಲಿ ಕಾರ್ಯಕ್ರಮದಲ್ಲಿ ಮಹಿಳಾ ಐಪಿಎಸ್ ಅಧಿಕಾರಿ ಜತೆ ಮಹಿಳಾ ಪೊಲೀಸ್ ಸಿಬ್ಬಂದಿಗಳು ಕುಣಿಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಶನಿವಾರ ನಡೆದ ಈ ಕಾರ್ಯಕ್ರಮದಲ್ಲಿ ಸಪ್ನಾ ಚೌಧರಿ ಅವರ ಹರಿಯಾಣ್ವಿ ಹಾಡು ತೇರಿ ಅಖ್ಯಾ ಕಾ ಯೋ ಕಾಜಲ್ ಹಾಡಿಗೆ ಮಹಿಳಾ ಪೊಲೀಸರು ಹೆಜ್ಜೆ ಹಾಕಿದ್ದಾರೆ. ಈ ನೃತ್ಯದ ನಡುವೆ ಪೊಲೀಸ್ ಒಬ್ಬರು ಐಪಿಎಸ್ ಅಧಿಕಾರಿ ಬೆನಿತಾ ಮೇರಿ ಜೈಕಾರ್ ಅವರನ್ನು ವೇದಿಕೆಗೆ ಎಳೆದು ತಂದಾಗ ಬೆನಿತಾ ಕೂಡಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. 
 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !