ಸಾರ್ವಜನಿಕ ಬಳಕೆಗೆ ದೇಶದ ವಾಯುಯಾನ ವಿಧೇಯಕದಿಂದ ಇನ್ನಷ್ಟೇ ಪರ ವಾನಗಿ ದೊರೆಯಬೇಕಿದೆ. ವೈಫೈ ಬಳಕೆಗೆ ಸಂಬಂಧಿಸಿದ ನಿಯಮ ರೂಪಿಸುವ ಸಲು ವಾಗಿ ಪ್ರಯಾಣಿಕರ ಪ್ರತಿಕ್ರಿಯೆ ಪಡೆಯಲು ಪರೀಕ್ಷಾರ್ಥ ಪ್ರಯೋಗ ಸಹಾಯಕವಾಗಲಿದೆ ಎಂದು ಕ್ಸಿನುವಾ ತಿಳಿಸಿದೆ. ಈ ವೈಫೈ ಸೇವೆ ಸ್ಯಾಟಲೈಟ್ನಿಂದ ಕಾರ್ಯಾಚರಿಸಲಿದ್ದು, ಹೆಚ್ಚಿನ ವ್ಯಾಪ್ತಿಯ ಬ್ಯಾಂಡ್ವಿಡ್ತ್ ಮತ್ತು ಸಿಗ್ನಲ್ ಸ್ಥಿರತೆ ಹೊಂದಿದೆ ಎಂದು ಚೀನಾ ಏರ್ಲೈನ್ಸ್ ಕ್ಸಿನುವಾ ಸುದ್ದಿಸಂಸ್ಥೆಗೆ ತಿಳಿಸಿದೆ.
ಈ ವೈಫೈ ಸೇವೆಯಿಂದಾಗಿ ಚೀನಾ ವಿಮಾನ ಪ್ರಯಾಣಿಕರು ಶೀಘ್ರವೇ ಸ್ಮಾರ್ಟ್ಫೋನ್ ಬಳಸುವಂತಾಗಲಿದೆ. ಈ ಮೊದಲು 2011ರಲ್ಲಿ ಚೀನಾ ವೈಫೈ ಇಂಟ್ರಾ ನೆಟ್ (ಸಂಸ್ಥೆಯೊಳಗಿನ ಆಂತರಿಕ ಸಂಪರ್ಕ) ಪರೀಕ್ಷೆ ನಡೆಸಿತ್ತು. ಅಂದರೆ ಏರ್ಲೈನ್ಸ್್ ನೆಟ್ವರ್ಕ್ ಬಳಸಲು ಮಾತ್ರ ಅವಕಾಶ ನೀಡಲಾಗಿತ್ತು.