ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘಾವಧಿ ಬ್ಯಾಟರಿಗೆ ಲಾವಾ ಉತ್ತರ

Last Updated 6 ಜನವರಿ 2015, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ ಮುಖ್ಯ ಸಮಸ್ಯೆ ಎಂದರೆ ಬ್ಯಾಟರಿ ಚಾರ್ಜ್‌ ಬೇಗನೆ ಮುಗಿದು ಹೋಗುವುದು. ಇಂಟರ್‌ನೆಟ್ ಬಳಕೆ, ಗೇಮ್‌ ಆಡುವುದಲ್ಲದೆ ಹಲವು ರೀತಿಯ ಅಪ್ಲಿಕೇಶನ್‌ ಬಳಸುವುದರಿಂದ ಹೆಚ್ಚಿನ ಶಕ್ತಿ ವ್ಯಯವಾಗುತ್ತದೆ.

ಈ ಸಮಸ್ಯೆಗೆ ಉತ್ತರವಾಗಿ ಲಾವಾ ಇಂಟರ್‌ ನ್ಯಾಷನಲ್ ಲಿಮಿಟೆಡ್ ಗರಿಷ್ಠ ಅವಧಿಯವರೆಗೆ ಬಳಕೆಗೆ ಬರುವ ಬ್ಯಾಟರಿ ಇರುವಂತಹ ‘ಲಾವಾ ಐರಿಸ್ ಫ್ಯುಯೆಲ್ 60’ ಎಂಬ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇತ್ತೀಚೆಗೆ ದೆಹಲಿಯಲ್ಲಿ ಲಾವಾ ಐರಿಸ್ ಸರಣಿಯಲ್ಲಿನ ಈ ಹೊಸ  ಸ್ಮಾರ್ಟ್‌ಫೋನನ್ನು ಕಂಪೆನಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹರಿ ಓಂ ರಾಯ್ ಬಿಡುಗಡೆ ಮಾಡಿದರು. ‘ಈ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್‌, 8,888ರ ಬೆಲೆಯಲ್ಲಿ 4000 ಮೆಗಾಹರ್ಟ್ಸ್ ಸಾಮರ್ಥ್ಯದ ಲಿ ಪಾಲಿಮರ್ ಬ್ಯಾಟರಿ ಹೊಂದಿರುವುದು ವಿಶೇಷತೆಯಾಗಿದೆ’ ಎಂದು ಅವರು ತಿಳಿಸಿದರು.

‘ಪದೇ ಪದೇ ಚಾರ್ಜಿಂಗ್ ಮಾಡುವ ಅವಶ್ಯಕತೆಯಿಲ್ಲ. ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದ ನಂತರ 2ಜಿ ಇಂಟರ್‌ನೆಟ್ ಬಳಕೆಯೊಂದಿಗೆ ನಿರಂತರ 32 ಗಂಟೆ ಮೊಬೈಲ್ ಚಾರ್ಜ್ ಉಳಿಯುತ್ತದೆ. ಇದು ಚಾರ್ಜ್‌ ಆಗಲು 3 ಗಂಟೆ 15 ನಿಮಿಷಗಳು ಬೇಕಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಕಾರ್ಯಾಚರಣ ವ್ಯವಸ್ಥೆ ಹೊಂದಿರುವ ಈ ಫೋನ್ 1.3 ಗಿಗಾ ಹರ್ಟ್ಸ್ ಕ್ವಾಡ್‌ಕೋರ್‌ ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. 8 ಜಿಬಿ ಮೆಮೊರಿ ಸಾಮರ್ಥ್ಯವಿದ್ದು, 32 ಜಿಬಿವರೆಗೆ ಮೆಮೊರಿ ವಿಸ್ತರಣೆಗೆ ಅವಕಾಶವಿದೆ. ಜೊತೆಗೆ 1 ಜಿಬಿ ರ್‍್ಯಾಮ್ ಇದ್ದು, ಸ್ಕ್ರ್ಯಾಚ್ ರೆಸಿಸ್ಟೆಂಟ್ ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದೆ.

ಸೋಲ್ಡರ್‌ ಲೆಸ್ ತಂತ್ರಜ್ಞಾನ ಇದರ ಪ್ರಮುಖ ಅಂಶವಾಗಿದ್ದು, ಮೊಬೈಲ್‌ನ ಪ್ರತಿ ಅಂಶವೂ ಪಿಸಿಬಿಎಗೆ ಸಂಪರ್ಕ ಹೊಂದಿದೆ. ಹತ್ತು ಮೆಗಾ ಪಿಕ್ಸೆಲ್ ಕ್ಯಾಮೆರಾ ಹಾಗೂ ಎರಡು ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. 3ಜಿ ಸಂಪರ್ಕವೂ ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT