ವಾನಿ ಫಿಲ್ಮ್ ಮೇಕರ್ಸ್’ ಬ್ಯಾನರ್ ಅಡಿಯಲ್ಲಿ ತಯಾರಾದ ‘ಉಮಿಲ್’ ಚಿತ್ರ ಹಲವು ಕುತೂಹಲಗಳನ್ನು ಹೊತ್ತು ತೆರೆಗೆ ಬರಲು ಸಿದ್ಧವಾಗಿದೆ. ಕತೆಯೊಳಗಿನ ಒಂದು ಸುಳಿವನ್ನೂ ಬಿಚ್ಚಿಡದ ಚಿತ್ರತಂಡ ಪ್ರೇಕ್ಷಕರ ಚಿತ್ರ ನೋಡುವ ಕುತೂಹಲವನ್ನು ಇನ್ನಷ್ಟು ಕೆರಳಿಸಿದೆ. ಹಾಸ್ಯ ಪ್ರಧಾನ ಚಿತ್ರವಿದು.ಕತೆಗೆ ಪೂರಕವಾಗಿಯೇ ಸನ್ನಿವೇಶ ಹೆಣೆಯುತ್ತಾ ಹೋಗುತ್ತಾರೆ ನಿರ್ದೇಶಕ ರಂಜಿತ್ ಸುವರ್ಣ. ಇಡೀ ಕತೆಯೇ ಹಾಸ್ಯಮಯವಾಗಿ ಸಾಗುತ್ತದೆ.

ಮುಖ್ಯ ಭೂಮಿಕೆಯಲ್ಲಿ ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ದೀಪಕ್ ರೈ ಕೊಣಾಜೆ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾರೆ. ಸಿನಿಮಾ ನಗುವಿನ ಕೊನೆಯಲ್ಲೊಂದು ಉತ್ತಮ ಸಂದೇಶ ನೀಡುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ‘ಉಮಿಲ್’ ಚಿತ್ರದ ನಾಯಕ

‘ಬಲೆ ತೆಲಿಪಾಲೆ’ ಖ್ಯಾತಿಯ ಉಮೇಶ್ ಮಿಜಾರು. ಇದುವರೆಗೆ ಸುಮಾರು 35 ಸಿನಿಮಾಗಳಲ್ಲಿ ಅಭಿನಯಿಸಿರುವ ಉಮೆಶ್ ಮಿಜಾರು ಅವರಿಗೆ ಉಮಿಲ್ ಸಿನಿಮಾದ ಪಾತ್ರ ತುಂಬಾ ವಿಭಿನ್ನವಂತೆ. ಸಿನಿಮಾದಲ್ಲಿ ಉಮಿಲ್ ಯಾರು ಎಂದು ಕೇಳಿದರೆ... ಎಲ್ಲ ಪ್ರಶ್ನೆಗೂ ಸಿನಿಮಾದಲ್ಲಿ ಉತ್ತರವಿದೆ ಎಂದು ನಗುತ್ತಾರೆ.

ತುಳು ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ‘ಉಮಿಲ್’ನ ನಿರ್ಮಾಪಕರು ಕರುಣಾಕರ ಶೆಟ್ಟಿ, ಪ್ರಜ್ಞೇಶ್ ಶೆಟ್ಟಿ ಹಾಗೂ ಪ್ರಜ್ವಲ್ ಶೆಟ್ಟಿ. ಕೆನಡಾ, ಮುಂಬೈ, ಹೈದರಾಬಾದ್ನಲ್ಲಿ ಚಿತ್ರದ ಗ್ರಾಫಿಕ್ಸ್ ಕೆಲಸ ನಡೆದಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡ ಉಮಿಲ್ ಚಿತ್ರಕ್ಕೆ ಮೊದಲ ಬಾರಿಗೆ ಕನ್ನಡದ ನಟ ಪುನೀತ್ ರಾಜ್ ಕುಮಾರ್ ಅವರು ತುಳು ಹಾಡೊಂದನ್ನು ಹಾಡಿದ್ದಾರೆ. ಆಡಿಯೋ ರೈಟ್ಸ್ನ್ನು ಪುನೀತ್ ರಾಜ್ಕುಮಾರ್ ಅವರ ಪಿ.ಆರ್.ಕೆ. ಆಡಿಯೋ ಸಂಸ್ಥೆ ಖರೀದಿಸಿದೆ.

ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಾಯಕ ನಟ ಸಾಗುವ ದಾರಿಯೇ ಕತೆಗೆ ಹಾಸ್ಯದ ಮೆರುಗು ತುಂಬುತ್ತದೆ. ಕತೆ ನಡೆಯುವ ಊರು ಕೂಡ ವಿಶೇಷತೆಯಿಂದ ಕೂಡಿದೆ. ಸಂಪೂರ್ಣವಾಗಿ ಸಸ್ಪೆನ್ಸ್ಗಳಿಂದ ತುಂಬಿರುವ ಸಿನಿಮಾವನ್ನು ನೋಡಲು ಡಿಸೆಂಬರ್ 7ರವರೆಗೆ ಕಾಯಬೇಕು.

ಹಾಸ್ಯ ನಟ ಭೋಜರಾಜ ವಾಮಂಜೂರು 8 ವಿಭಿನ್ನ ಪಾತ್ರಗಳಲ್ಲಿ ನಟಿಸಿರುವುದಲ್ಲದೆ, ಅರವಿಂದ್ ಬೋಳಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಕ್ಷಗಾನದ ಚಾರ್ಲಿ ಚಾಪ್ಲಿನ್ ಎಂದೇ ಕರೆಸಿಕೊಳ್ಳುವ ಸೀತರಾಮ್ ಕಟೀಲ್ ಕೂಡ ‘ಉಮಿಲ್’ನಲ್ಲಿ ಅಭಿನಯಿಸುವ ಮೂಲಕ ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ‘ನಮ್ಮ ಊರುದ ನಮ್ಮ ತೋಡುದ’ ಅಡಿ ಟಿಪ್ಪಣಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.