ಶನಿವಾರ, ಸೆಪ್ಟೆಂಬರ್ 18, 2021
24 °C

ಜಸ್ಟ್‌ ಮ್ಯೂಸಿಕ್‌–31 | ಮಲೆನಾಡಿನಿಂದ ಹಿಮಾಲಯದವರೆಗೆ

ಪಂಡಿತ್‌ ಹೆಗ್ಗಾರ ಅನಂತ ಹೆಗಡೆ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಿರಾಣಾ ಘರಾಣೆ, ಬನಾರಸ್‌ ಘರಾಣೆ ಮಿಶ್ರ ಶೈಲಿ ಹಾಡುವ ಅಪರೂಪದ ಕಲಾವಿದರಾಗಿದ್ದಾರೆ. ಮಲೆನಾಡಿನ ಪ್ರಕೃತಿ ಮಡಿಲಲ್ಲಿ ಹುಟ್ಟಿದ ಅವರು ಸಂಗೀತ ಗುರುವನ್ನರಸಿ ಹಿಮಾಲಯದ ತಪ್ಪಲಲ್ಲಿರುವ ಉತ್ತರಖಂಡ ರಾಜ್ಯದ ಡೆಹರಾಡೂನ್‌ವರೆಗೂ ತೆರಳುತ್ತಾರೆ. ಗುರುಕುಲ ಪದ್ಧತಿಯಲ್ಲಿ ಸಂಗೀತ ಕಲಿತಿರುವ ಅವರು ನಾಡಿನಾದ್ಯಂತ ಕಾರ್ಯಕ್ರಮ ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಬನಾರಸ್‌ ಘರಾಣೆಯಲ್ಲಿ ಹಾಡುವ ವಿರಳಾತಿ ವಿರಳ ಗಾಯಕರಲ್ಲಿ ಪಂಡಿತ್‌ ಹೆಗ್ಗಾರ ಅನಂತ ಹೆಗಡೆ ಅವರೂ ಒಬ್ಬರು. ಅವರ ಹಿತಾನುಭವಗಳು ಈ ವಾರದ ‘ಜಸ್ಟ್‌ ಮ್ಯೂಸಿಕ್‌’ ಸರಣಿಯಲ್ಲಿವೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...