ಸೋಮವಾರ, ಸೆಪ್ಟೆಂಬರ್ 21, 2020
22 °C

ಉಡುಪಿ ಕೃಷ್ಣನಿಗೆ ‘ಪಟ್ಟಾಭಿರಾಮ’ ಅಲಂಕಾರ

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ಸಂದರ್ಭ ಉಡುಪಿಯ ಕೃಷ್ಣಮಠದಲ್ಲಿ ದೇವರಿಗೆ ಮಹಾ ಪೂಜೆ ನೆರವೇರಿತು.

ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ದೇವರಿಗೆ ಮಂಗಳಾರತಿ ಮಾಡಿ ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರುವಂತೆ ಪ್ರಾರ್ಥಿಸಿದರು.

ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಕೃಷ್ಣನಿಗೆ ವಿಶೇಷವಾಗಿ 'ಪಟ್ಟಾಭಿರಾಮ'  ಅಲಂಕಾರ ಮಾಡಿದ್ದರು.