ಭಾನುವಾರ, ಮೇ 31, 2020
27 °C

ಬೆಂಗಳೂರು: ಪಾದರಾಯನಪುರದಲ್ಲಿ ಸೀಲ್‌ ಡೌನ್‌ ಇದ್ದರೂ ಗುಂಪುಗೂಡಿದ ಜನ

ಬೆಂಗಳೂರು: ಇಂದಿನಿಂದ (ಶುಕ್ರವಾರ) ಸೀಲ್ ಡೌನ್ ಆಗಿರುವ ಪಾದರಾಯನಪುರದಲ್ಲಿ ಉಚಿತ ಹಾಲಿನ ಪ್ಯಾಕೆಟ್‌ಗಾಗಿ ಹತ್ತಾರು ಜನ ಸರದಿಯಲ್ಲಿ ನಿಂತಿರುವುದು ಬೆಳಿಗ್ಗೆ ಕಂಡುಬಂದಿತ್ತು. ಸುಮಾರು 1 ಗಂಟೆಯಿಂದ ಜನರು ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ ಈ ವ್ಯಾಪ್ತಿಯ ಕಾರ್ಪೊರೇಟರ್ ಹಾಗೂ ಅವರ ತಂದೆ ಬರದೇ ಹಾಲು ಕೊಡಲಾಗುವುದಿಲ್ಲ ಎಂದು ಅವರ ಹಿಂಬಾಲಕರು ಜನರನ್ನು ನಿಲ್ಲಿಸಿದ್ದರು. ಗುರುವಾರ ರಾತ್ರಿ ಶಬ್ ಈ ಬರಾತ್ ಜಾಗರಣೆ ಮುಗಿಸಿ ಮಲಗಿರುವ ಕಾರ್ಪೊರೇಟರ್ ತಂದೆ ಎಚ್ಚರವಾಗುವ ವರೆಗೂ ಯಾರಿಗೂ ಹಾಲು ಸಿಗುವುದಿಲ್ಲ ಎಂದು ಹಿಂಬಾಲಕರು ಜನರಿಗೆ ಹೇಳುತ್ತಿದ್ದರು.

ಇದನ್ನೂ ಓದಿ: Explainer | ಲಾಕ್‌ಡೌನ್ ಆಯ್ತು, ಸೀಲ್‌ಡೌನ್ ಎಂದರೇನು?