ಸೋಮವಾರ, ಮಾರ್ಚ್ 30, 2020
19 °C

ಬೆಂಗಳೂರು ಲಾಕ್‌ಡೌನ್: ಪ್ರವೇಶ ನಿರ್ಬಂಧ

ಕೊರೊನಾ ವೈರಸ್ ಲಾಕ್‌ಡೌನ್: ಬೆಂಗಳೂರು - ಮೈಸೂರು ರಿಂಗ್ ರಸ್ತೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗಲು ಮತ್ತು ಮೈಸೂರು ಕಡೆಯಿಂದ ಬೆಂಗಳೂರು ಬರುವವರನ್ನು ತಪಾಸಣೆ ಮಾಡಲಾಗುತ್ತಿದೆ. ಕೆಂಗೇರಿಯಲ್ಲಿಯೂ ಬೆಂಗಳೂರಿಗೆ ಬರುವವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅನಾರೋಗ್ಯದಿಂದ ಕೂಡಿರುವವರು, ತರಕಾರಿ, ಹೂ ಸಾಗಣೆ ಮಾಡುವವರನ್ನು ಮಾತ್ರ ಒಳಬಿಡಲಾಗುತ್ತಿದೆ. ಇನ್ನುಳಿದಂತೆ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿ ಅವಶ್ಯವಿದ್ದವರನ್ನು ಬಿಡಲಾಗುತ್ತಿದೆ. ಉಳಿದವರನ್ನು ವಾಪಸ್‌ ಕಳಿಸಲಾಗುತ್ತಿದೆ.

ಪ್ರತಿಕ್ರಿಯಿಸಿ (+)