ಸೋಮವಾರ, ಆಗಸ್ಟ್ 10, 2020
22 °C

ದುಬಾರಿ ವಾಚ್ ವಿವಾದ: ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ ಎಂದ ಸಿದ್ದರಾಮಯ್ಯ

ಮೈಸೂರು: ದುಬಾರಿ ವಾಚ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಕರಣದ ವಿಚಾರಣೆ ನಡೆಸಿದ ಎಸಿಬಿ ಕ್ಲೀನ್ ಚಿಟ್ ಕೊಟ್ಟಿದೆ. ನನಗೆ ಯಾರೋ ಗಿಫ್ಟ್‌ ಕೊಟ್ಟಿದ್ದ ವಾಚನ್ನು ಸರ್ಕಾರಕ್ಕೇ ವಾಪಸ್ ಕೊಟ್ಟಿರುವೆ. ಬಿಜೆಪಿಯು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.