ಮಂಗಳವಾರ, ಮೇ 11, 2021
19 °C

ನೋಡಿ: ಬೆಂಗಳೂರು| ತಾವರೆಕೆರೆ ಬಳಿ ಸ್ಮಶಾನದಲ್ಲಿ ಸಾಲು ಸಾಲು ಮೃತದೇಹಗಳು

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಚಿತಾಗಾರಗಳ ಮುಂದೆ ಹೆಣಗಳನ್ನು ಸಾಲಾಗಿ ಇಡಲಾಗಿದೆ. ಶವಗಳ ದಹನ ಕ್ರಿಯೆಗಾಗಿ ಆಂಬುಲೆನ್ಸ್‌ಗಳು ಸಾಲಾಗಿ ನಿಂತಿದ್ದು, ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಾಸಂಸ್ಕಾರಕ್ಕಾಗಿ ಸಂಬಂಧಿಕರು ಕಾಯುತ್ತಿದ್ದಾರೆ. ಬೆಂಗಳೂರು ಹೊರವಲಯ ತಾವರೆಕೆರೆ ಬಳಿ ರಾಜ್ಯ ಸರ್ಕಾರವು ಸ್ಮಶಾನ ನಿರ್ಮಾಣ ಮಾಡಿದ್ದು, ಶವಗಳ ದಹನ ಕ್ರಿಯೆ ನಡೆಯುತ್ತಿದೆ. ಬೆಂಗಳೂರು ನಗರ ಜಿಲ್ಲಾಡಳಿತ ಮತ್ತು ಬಿಬಿಎಂಪಿ ವತಿಯಿಂದ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಬಳಿ ಕೊರೊನಾ ಸೊಂಕಿನಿಂದ ಸಾವಿಗೀಡಾದವರ ಅಂತ್ಯ ಸಂಸ್ಕಾರಕ್ಕೆ ಸ್ಮಶಾನವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp