ಗುರುವಾರ , ಮೇ 6, 2021
25 °C

Video | ಜಲಾಶಯಗಳು ಭರ್ತಿ, ಕೆರೆ ಕೋಡಿ ಒಡೆದು ಬೆಳೆ, ಸೇತುವೆ, ರಸ್ತೆಗಳು ಮುಳುಗಡೆ

ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಅಲ್ಲಿನ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ರಾಜ್ಯಕ್ಕೆ ಹರಿದುಬರುತ್ತಿದೆ. ಬೆಳಗಾವಿಯಲ್ಲಿ ಉಕ್ಕಿ ಹರಿಯುತ್ತಿರುವ ಪಾಂಡರಿ ನದಿಯಿಂದ ರೈಲ್ವೆ ಹಳಿಗೆ ಧಕ್ಕೆಯಾಗಿದೆ. ಕೃಷ್ಣಾ ಪ್ರವಾಹದಿಂದಾಗಿ ರಾಯಬಾಗ–ಕುಡಚಿ ಸೇತುವೆ ಜಲಾವೃತವಾಗಿದೆ. ಘಟಪ್ರಭಾ ಉಕ್ಕಿ ಹರಿಯುತ್ತಿರುವುದರಿಂದ ಗೋಕಾಕ ಹೊರವಲಯದ ಲೋಳಸೂರ ಸೇತುವೆ ಜಲಾವೃತವಾಗಿದೆ. ಕೊಯ್ನಾ ಜಲಾಶಯದಿಂದ 55,958 ಕ್ಯುಸೆಕ್‌ ಸೇರಿದಂತೆ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ 1.21 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಪ್ರವಾಹದಿಂದ ಗೋವಿನಕೊಪ್ಪ-ಗದಗ ಜಿಲ್ಲೆ ಕೊಣ್ಣೂರು ನಡುವಿನ ಚಿಕ್ಕ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಸತತ ಮಳೆಯಿಂದಾಗಿ ಹುಬ್ಬಳ್ಳಿ ಹಾಗೂ ಕುಂದಗೋಳಕ್ಕೆ ನೀರು ಪೂರೈಸುವ ಕಲಘಟಗಿ ತಾಲ್ಲೂಕಿನ ನೀರಸಾಗರ ಉಕ್ಕಿ ಹರಿದಿದೆ.