ಶನಿವಾರ, ಮಾರ್ಚ್ 28, 2020
19 °C

ಬೇಸಿಗೆಯಲ್ಲಿ ಹೂವರಳಿಸಿದ ಶೃಂಗಾರದ ಹೊಂಗೆಮರ

 

ಸುಡುಸುಡು ಬಿಸಿಲು, ನೆಲದ ಎದೆಗುದ್ದಿ ಸೆಖೆಯನ್ನು ಹೊರಕಕ್ಕುತ್ತಿತ್ತು. ಹಬೆಕೊಳವೆಯಿಂದ ಹೊರಬಿಟ್ಟಂತೆ ಬಿಸಿಬಿಸಿ ಗಾಳಿ ಹರಿದಾಡುತ್ತಿರುವ ಹೊತ್ತಿನಲ್ಲಿಯೇ ನಿರ್ದೇಶಕ ಯೋಗರಾಜ ಭಟ್‌ ಅವರು ತಮ್ಮ ಹೊಸ ಸಿನಿಮಾ ‘ಪಂಚತಂತ್ರ’ದ ತಂಡದೊಂದಿಗೆ ‘ಪ್ರಜಾವಾಣಿ’ ಕಚೇರಿಗೆ ದಾಳಿ ಮಾಡಿದರು.

‘ಪಂಚತಂತ್ರ’ ಆಮೆ–ಮೊಲದ ರೇಸ್‌ ಕಥೆಯ ಆಧುನಿಕ ರೂಪವಂತೆ. ಆ ರೇಸ್‌ನ ಕ್ಯುರೇಟರ್‌ನಂತೆ ಕಾಣಿಸುತ್ತಿದ್ದ ಭಟ್ಟರ ಜತೆಗೆ ‘ಮೊಲ’ ಪಕ್ಷದವರು ಮಾತ್ರ ಇದ್ದರು.

ಬಹುಶಃ ‘ಆಮೆ’ಗಳಿಗೆ ವಿಶ್ರಾಂತಿ ನೀಡಿರಬೇಕು. ನಾಳೆ ಚಿತ್ರರಂಗದಲ್ಲಿ ಓಟ ಶುರುಮಾಡಬೇಕಲ್ಲ! ಈ ವಾರದ ‘ಸುಧಾ’ ವಾರಪತ್ರಿಕೆಯ ಹಾಸ್ಯಸಂಚಿಕೆಯಲ್ಲಿ ಬಂದ ತಮ್ಮದೇ ವ್ಯಂಗ್ಯಚಿತ್ರವನ್ನು ನೋಡಿ ‘ಮನಸಾರೆ’ ನಗುತ್ತಾ ಮಾತಿಗೆ ಕೂತ ಅವರು ಮೊದಲು ‘ನಂಗೆ ರಾಜಕೀಯಕ್ಕೆ ಆಗಿಬರೂದಿಲ್ಲ.

ನಂಗೆ ಯಾವ ಪಕ್ಷ ಗಿಕ್ಷದ ಬಗ್ಗೆಯೂ ಆಸಕ್ತಿ ಇಲ್ಲ. ಎಲ್ರನ್ನೂ ಒಟ್ಟೊಟ್ಟಿಗೇ ಕಾಲೆಳೆಯೂದು ಅಂದ್ರೆ ಸಿಕ್ಕಾಪಟ್ಟೆ ಖುಷಿ’ ಎಂಬ ಸ್ಪಷ್ಟೀಕರಣ ಕೊಟ್ಟುಕೊಂಡೇ ಮುಂದುವರಿದರು.

video courtesy: DBeatsMusicWorld

ಪ್ರತಿಕ್ರಿಯಿಸಿ (+)