ಗುರುವಾರ , ಏಪ್ರಿಲ್ 9, 2020
19 °C

‘ನಾವೂ ಸಾಮಾನ್ಯರೇ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಅವರನ್ನು ನೋಡಿದರೆ ಹೇಳಿ ಮಾಡಿಸಿದ ಜೋಡಿ ಎಂದು ಅನಿಸದೇ ಇರಲ್ಲ. ಅವರಿಬ್ಬರೂ ಅಷ್ಟೇ, ಸಮಯ ಸಿಕ್ಕಾಗಲೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮಿಬ್ಬರ ನಡುವಿನ ಪ್ರೀತಿ, ಬಾಂಧವ್ಯವನ್ನು ಹಂಚಿಕೊಳ್ಳುತ್ತಾರೆ.  ಹಾಗೇ ಅತಿ ಹೆಚ್ಚು ಟ್ರೋಲ್‌ ಆದ ಜೋಡಿಯೂ ಅವರೇ ಆಗಿರಬಹುದು. ಇಬ್ಬರೂ ಸ್ಟಾರ್‌ಗಳು. ಅವರ ಜೀವನ ಹೇಗಿರಬಹುದು ಎಂಬ ಕುತೂಹಲ ಎಲ್ಲರದ್ದು. ಅದಕ್ಕೆ ಈಗ ವಿರಾಟ್‌ ಉತ್ತರಿಸಿದ್ದಾರೆ. 

‘ಅನುಷ್ಕಾ ಶರ್ಮ ಹಾಗೂ ನಾನು ಜನರು ಭಾವಿಸಿದ್ದಂತೆ ಕಾಲ್ಪನಿಕ ಲೋಕದಲ್ಲಿ ಬದುಕುತ್ತಿಲ್ಲ. ನಾವು ಮನೆಯಲ್ಲಿ ಸಾಮಾನ್ಯ ಪತಿ ಪತ್ನಿಯರಂತೆ ಇದ್ದೇವೆ’ ಎಂದು ವಿರಾಟ್‌ ಹೇಳಿಕೊಂಡಿದ್ದಾರೆ. ‘ನಮ್ಮ ಸ್ಟಾರ್‌ಗಿರಿ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಲು  ಅವಕಾಶ ಮಾಡಿಕೊಡುವುದಿಲ್ಲ. ಆದರೆ ಈಗಿನ ಯುವ ಪೀಳಿಗೆಗೆ ಅದು ಪ್ರೇರಣೆಯಂತೆ ಅದನ್ನು ಬಳಸಿಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ. 

‘ನಾವಿಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಮದುವೆಯಾದ ಆರಂಭದಲ್ಲಿ ನಮಗೂ ವೈಯಕ್ತಿಕ ಬದುಕಿದೆ. ಜನರು ಅದಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂದು ಅಂದುಕೊಳ್ಳುತ್ತಿದ್ದೇವು. ಆದರೆ ಕ್ರಿಕೆಟ್ ಹಾಗೂ ಸಿನಿಮಾವನ್ನು ಆರಾಧಿಸುವ ದೇಶದಲ್ಲಿ ಜನರು ನಮ್ಮ ಬಗ್ಗೆ ಈ ತರದ ಕುತೂಹಲಗಳನ್ನು ಹೊಂದಿರುತ್ತಾರೆ ಎಂಬುದು ಅರ್ಥವಾಯಿತು. ಆದರೆ ಅವರೆಲ್ಲರ ನಿರೀಕ್ಷೆಯಂತೆ ನಾವು ಕಾಲ್ಪನಿಕ ಅಥವಾ ಸಿನಿಮಾಗಳಲ್ಲಿ ತೋರಿಸಿದಂತೆ  ಬದುಕುತ್ತಿಲ್ಲ.   ನಮ್ಮ ಜೀವನಶೈಲಿ ಶ್ರೀಮಂತವಾಗಿರಬಹುದು, ಆದರೆ ನಿಜಜೀವನದಲ್ಲಿ ನಾವು ಸಾಮಾನ್ಯ ಮನುಷ್ಯರೇ’ ಎಂದಿದ್ದಾರೆ. 

‘ಈ ಸ್ಟಾರ್‌ಗಿರಿಯಿಂದ ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ. ನನಗೆ ಹಾಗೂ ನನ್ನ ಪತ್ನಿಗೆ ಇದರ ಅರಿವಿದೆ. ಜನರಿಗೆ ಇದು ಪ್ರೇರಣೆಯಾಗಿ, ನಾವು ಅವರಿಗೆ ಸಾಧನೆ ಮಾಡಲು ಉತ್ತಮ ಉದಾಹರಣೆಯಾಗಬೇಕು ಎಂಬುದು ನಮ್ಮಾಸೆ. ಜನರು ಸರಿಯಾದ ವ್ಯಕ್ತಿ ಅಥವಾ ಮಾದರಿಯನ್ನು ಅನುಕರಿಸುವಂತೆ ನಾವು ಮಾಡಬೇಕು. ಇನ್ನೊಬ್ಬರು ನಮ್ಮ ಬಗ್ಗೆ ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ, ಸರಿಯಾಗಿ ಗುರಿ ತಲುಪುವುದು ಮುಖ್ಯ’ ಎಂದು ಹೇಳಿದ್ದಾರೆ.

‘ಭಾರತದಲ್ಲಿ ಅಭಿಮಾನಿಗಳ ಕಣ್ಣಿಂದ ತಪ್ಪಿಸಿಕೊಳ್ಳುವುದು ತುಂಬ ಕಷ್ಟ’ ಎಂದು ತಮ್ಮ ಸಂಕಷ್ಟ ತೋಡಿಕೊಂಡಿರುವ ಅವರು, ‘ಬೇರೆ
ದೇಶಗಳಲ್ಲಿ ಪ್ರವಾಸಕ್ಕೆ ತೆರಳಿದಾಗ ಸಾಮಾನ್ಯರಂತೆ ನಾವು ಸಂತೋಷ ಪಡುತ್ತೇವೆ. ನಮ್ಮಿಬ್ಬರಿಗೂ ಪ್ರಾಣಿಗಳೆಂದರೆ ತುಂಬ ಇಷ್ಟ’ ಎಂದು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು