‘ವ್ಹೀಲಿಂಗ್’: ಕಾನ್‌ಸ್ಟೆಬಲ್‌ಗೆ ಡಿಕ್ಕಿ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

‘ವ್ಹೀಲಿಂಗ್’: ಕಾನ್‌ಸ್ಟೆಬಲ್‌ಗೆ ಡಿಕ್ಕಿ

Published:
Updated:

ಬೆಂಗಳೂರು: ವ್ಹೀಲಿಂಗ್ ಮಾಡಿಕೊಂಡು ಬಂದ ಸ್ಕೂಟರ್ ಸವಾರನೊಬ್ಬ, ತನ್ನನ್ನು ಹಿಡಿಯಲು ಬಂದ ಕಾನ್‌ಸ್ಟೆಬಲ್‌ಗೇ ವಾಹನ ಗುದ್ದಿಸಿ ಪರಾರಿಯಾಗಿದ್ದಾನೆ!

ಭಾನುವಾರ ನಸುಕಿನ ವೇಳೆ (3.30ರ ಸುಮಾರಿಗೆ) ಯಲಹಂಕ ವಾಯುನೆಲೆ ಸಮೀಪ ಈ ಘಟನೆನಡೆದಿದೆ. ಕಾನ್‌ಸ್ಟೆಬಲ್ ಮಾರ್ಕಂಡಪ್ಪ ಅವರ ಕಾಲಿನ ಮೂಳೆ ಮುರಿದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ವಾಯುನೆಲೆ ಸಮೀಪದ ಸರ್ವಿಸ್ ರಸ್ತೆಯಲ್ಲಿ ಕೆಲ ಯುವಕರು ವ್ಹೀಲಿಂಗ್ ಮಾಡುತ್ತಿರುವ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ಬಂತು. ಆಗ ಅಲ್ಲೇ ಗಸ್ತು ತಿರುಗುತ್ತಿದ್ದ ಮಾರ್ಕಂಡಪ್ಪ ಹಾಗೂ ಸಿಬ್ಬಂದಿಗೆ ಆ ಸಂದೇಶ ರವಾನಿಸಲಾಯಿತು. ‘ಡಿಯೊ’ ಸ್ಕೂಟರ್‌ನಲ್ಲಿ ವ್ಹೀಲಿಂಗ್ ಮಾಡುತ್ತ ಬಂದ ಯುವಕನನ್ನು ಕಂಡ ಮಾರ್ಕಂಡಪ್ಪ, ವಾಹನ ನಿಲ್ಲಿಸುವಂತೆ ರಸ್ತೆಗೆ ಅಡ್ಡ ಹೋದಾಗ ಆತ ಗುದ್ದಿಸಿದ್ದಾನೆ’ ಎಂದು ಯಲಹಂಕ ಪೊಲೀಸರು ಹೇಳಿದರು.

‘ಗುದ್ದಿದ ಬಳಿಕ ಆತ ನಿಯಂತ್ರಣ ಕಳೆದುಕೊಂಡಿದ್ದಾನೆ. ಇದರಿಂದ ಸ್ಕೂಟರ್ ಅಡ್ಡಾದಿಡ್ಡಿಯಾಗಿ ಸಾಗಿ, ರಸ್ತೆ ಬದಿಯ ತಡೆಗೋಡೆಗೆ ಅಪ್ಪಳಿಸಿದೆ. ಆಗ ಆತ ವಾಹನ ಬಿಟ್ಟು ಓಡಿ ಹೋಗಿದ್ದಾನೆ. ಈ ಸಂಬಂಧ ಯಲಹಂಕ ಸಂಚಾರ ಠಾಣೆಗೆ ದೂರು ಕೊಟ್ಟಿದ್ದು, ನೋಂದಣಿ ಸಂಖ್ಯೆ ಆಧರಿಸಿ ಆರೋಪಿಯ ಪತ್ತೆ ಕಾರ್ಯದಲ್ಲಿ ತೊಡಗಿದ್ದೇವೆ’ ಎಂದು ಮಾಹಿತಿ ನೀಡಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !