ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ಯಾಷನ್‌: ಎಂದಿಗೂ ಹಳತಾಗದ ಸ್ಕಾರ್ಫ್ ಫ್ಯಾಷನ್‌

Published 14 ಅಕ್ಟೋಬರ್ 2023, 0:26 IST
Last Updated 14 ಅಕ್ಟೋಬರ್ 2023, 0:26 IST
ಅಕ್ಷರ ಗಾತ್ರ

ಲೇಖನ– ಚೇತನ ಜೆ.ಕೆ

ಹಿಂದೆಲ್ಲಾ ಚಳಿಗಾಲದಲ್ಲಿ ಬೆಚ್ಚಗಿರಲು ಸ್ಕಾರ್ಫ್ಗಳನ್ನು ಧರಿಸಲಾಗುತ್ತಿತ್ತು. ಕ್ರಮೇಣ ಸ್ಕಾರ್ಫ್‌ಗಳಿಗೆ ಫ್ಯಾಶನ್ ಟಚ್ ಕೊಡಲಾಯಿತು. ಧರಿಸಿರುವ ಉಡುಪಿನ ಅಂದ ಹೆಚ್ಚಿಸಲು, ಇನ್ನಷ್ಟು ಸ್ಟೈಲಿಶ್ ಆಗಿ ಕಾಣಲು ಮಹಿಳೆಯರು ಸ್ಕಾರ್ಫ್ ಧರಿಸಲಾರಂಭಿಸಿದರು. ಧರಿಸಿರುವ ಸ್ಕಾರ್ಫ್‌ ವ್ಯಕ್ತಿಯ ವ್ಯಕ್ತಿತ್ವವನ್ನೂ ತೋರುತ್ತದೆ.
ಸ್ಕಾರ್ಫ್ ಬಳಕೆಗೆ ಈಚೀನದ್ದಲ್ಲ. ಕ್ರಿ.ಶ. 1350ರಲ್ಲಿಯೇ ಈಜಿಪ್ಟಿನ ರಾಣಿ ನೆಫರ್‌ಟಿಟಿ ಉಣ್ಣೆಯ ನೂಲಿನಿಂದ ಹೆಣೆದ ಸ್ಕಾರ್ಫ್ಅನ್ನು ಕತ್ತಿನ ಸುತ್ತ ಧರಿಸುತ್ತಿದ್ದಳು ಎಂಬ ಉಲ್ಲೇಖವು ಇತಿಹಾಸದಲ್ಲಿದೆ.

ಫ್ಯಾಶನ್ ಟ್ರೆಂಡ್ ಪುನರಾವರ್ತನೆ ಆಗುತ್ತಿರುತ್ತದೆ ಎಂಬುದಕ್ಕೆ ಸ್ಕಾರ್ಫ್ ಟ್ರೆಂಡ್‌ಯೇ ಸಾಕ್ಷಿ. 2023ರ ಕಡೆಯಲ್ಲಿ ಈ ಟ್ರೆಂಡ್ ಮತ್ತೆ ಸದ್ದು ಮಾಡುತ್ತಿದೆ.

ಈಗ ಟ್ರೆಂಡ್‌ನಲ್ಲಿರುವ ಸ್ಕಾರ್ಫ್‌ ಮಾದರಿಗಳು

ಚೌಕಾಕಾರದ ಸ್ಕಾರ್ಫ್‌ (ಸ್ಕ್ವೇರ್‌ ಸ್ಕಾರ್ಫ್‌): ಚಿಕ್ಕಗಾತ್ರದ ಚೌಕಾಕಾರದ ಸ್ಕಾರ್ಫ್‌ಗಳು ಇಂದಿನ ಕಾಲೇಜು ಹುಡುಗಿಯರು ಮತ್ತು ಉದ್ಯೋಗಸ್ಥ ಮಹಿಳೆಯರ ನೆಚ್ಚಿನ ಆಯ್ಕೆ. ತ್ರಿಕೋನಾಕಾರವಾಗಿ ಈ ಸ್ಕಾರ್ಫ್‌ಅನ್ನು ಮಡಚಿ ಕತ್ತಿನ ಸುತ್ತ ಧರಿಸುವುದು ಬಹಳ ಸುಲಭ. ಎಲ್ಲಾ ರೀತಿಯ ನೆಕ್‌ಗಳಿಗೂ ಈ ಮಾದರಿಯ ಸ್ಕಾರ್ಫ್‌ ಹೊಂದುತ್ತದೆ. ಸ್ಲೀವ್‌ಲೆಸ್‌ ತೋಳಿನ ಡ್ರೆಸ್‌ ಧರಿಸಿದಾಗ ಮುಂಗೈಗೆ ಸ್ಕಾರ್ಫ್‌ ಕಟ್ಟಿಕೊಂಡರೆ ನಿಮ್ಮದೇ ಆದ ಸ್ಟೈಲ್‌ ಸ್ಟೇಟ್‌ಮೆಂಟ್‌ ಕೊಟ್ಟಂತೆ. ಜುಟ್ಟಿಗೆ, ಸ್ಲಿಂಗ್‌ ಬ್ಯಾಗ್‌ಗೆ ಕಟ್ಟುವ ಫ್ಯಾಷನ್‌ ಕೂಡ ಇನ್ನೂ ಚಾಲ್ತಿಯಲ್ಲಿದೆ.

ಬ್ಲಾಂಕೆಟ್‌ ಸ್ಕಾರ್ಫ್‌: ಇನ್ನೇನು ಚಳಿಗಾಲ ಆರಂಭವಾಗುತ್ತದೆ. ಬ್ಲಾಂಕೆಟ್‌ ಸ್ಕಾರ್ಫ್‌ಗಳನ್ನು ಕೊಂಡು ನಿಮ್ಮ ಕಪ್‌ಬೋರ್ಟ್‌ಗಳಲ್ಲಿ ಇರಿಸಲು ಇದು ಸೂಕ್ತ ಸಮಯ. ಉಣ್ಣೆಯಿಂದ ತಯಾರಿಸಲಾಗುವ ಈ ಸ್ಕಾರ್ಫ್‌ಗಳನ್ನು ಕತ್ತಿನ ಸುತ್ತ ಧರಿಸಿದರೆ ಅಥವಾ ಭುಜಗಳ ಮೇಲೆ ಹಾಗೇ ಹರಿಬಿಟ್ಟರೆ ಚಂದ. ಪ್ಲೇನ್ ಟಿ–ಶರ್ಟ್‌ ಅಥವಾ ಕುರ್ತಿ ಮೇಲೆ ಇದನ್ನು ಧರಿಸಿದರೆ ಚಳಿಗಾಲದಲ್ಲಿ ಟ್ರೆಂಡಿ ಆಗಿ ಕಾಣುತ್ತೀರಿ. ದೊಡ್ಡ ಚೆಕ್ಸ್‌, ದೊಡ್ಡ ಹೂಗಳ ಪ್ರಿಂಟ್‌ ಇರುವ ಬ್ಲಾಂಕೆಟ್‌ ಸ್ಕಾರ್ಫ್‌ಗಳು ಈಗ ಟ್ರೆಂಡ್‌ನಲ್ಲಿ ಇವೆ. 

ಉದ್ದನೆಯ ಸ್ಕಾರ್ಫ್‌ (ಲಾಂಗ್‌ ಸ್ಕಾರ್ಫ್‌): ಈ ಮಾದರಿಯ ಸ್ಕಾರ್ಫ್‌ಗಳು ಸರ್ವಕಾಲಿಕ ಫ್ಯಾಷನ್‌ ಸ್ಟೇಟ್‌ಮೆಂಟ್‌ ಎಂದೇ ಕರೆಸಿಕೊಂಡಿವೆ. ಈಗ ಈ ಸ್ಕಾರ್ಫ್‌ಗಳನ್ನು ಧರಿಸುವ ವಿಧಾನದಲ್ಲಿ ತುಸು ಬದಲಾವಣೆಯಾಗಿದೆ. ಪ್ಲೇನ್‌ ಕುರ್ತಾ ಅಥವಾ ಟಾಪ್‌ ಧರಿಸಿದಾಗಿ ಲಾಂಗ್‌ ಸ್ಕಾರ್ಫ್‌ಅನ್ನು ಎರಡು ಭುಜಗಳಿಂದ ಹರಿಬಿಟ್ಟು. ಅದರ ಮೇಲೆ ದೊಡ್ಡಗಾತ್ರದ ಬೆಲ್ಟ್‌ ಧರಿಸುವುದು ಸದ್ಯದ ಟ್ರೆಂಡ್‌.

ಲಾಂಗ್‌ ಸ್ಕಾರ್ಫ್‌ 
ಲಾಂಗ್‌ ಸ್ಕಾರ್ಫ್‌ 
ಲಾಂಗ್‌ ಸ್ಕಾರ್ಫ್‌ 
ಲಾಂಗ್‌ ಸ್ಕಾರ್ಫ್‌ 
ಬ್ಲಾಂಕೆಟ್‌ ಸ್ಕಾರ್ಫ್‌ 
ಬ್ಲಾಂಕೆಟ್‌ ಸ್ಕಾರ್ಫ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT