ತಾಯಿಯಾದ ಆಸ್ಪತ್ರೆಯಲ್ಲೇ ನೌಕರಿ
ಮೆದೀನಾಗೆ ಬಾಲ್ಯದಲ್ಲಿ ಮೊದಲ ಹೆರಿಗೆ ಮಾಡಿಸಿದ್ದ ವೈದ್ಯರು, ಅದೇ ಆಸ್ಪತ್ರೆಯಲ್ಲಿ ತಮ್ಮ ಸಹಾಯಕಳಾಗಿ ಕೆಲಸಕ್ಕೆ ನಿಯೋಜಿಸಿಕೊಂಡರು. ರೌಲ್ ಜುರಾಡೋ ಎಂಬವರನ್ನು 1966ರಲ್ಲಿ ವರಿಸಿದ ಮೆದೀನಾ, 1972ರಲ್ಲಿ ಅಂದರೆ 39ನೇ ವಯಸ್ಸಿನಲ್ಲಿ ಮತ್ತೊಂದು ಮಗುವಿಗೆ ಜನ್ಮ ನೀಡಿದಳು. ಪ್ರಚಾರಗಳಿಂದ ದೂರ ಉಳಿದ ಮೆದೀನಾ, ಪೆರುವಿನಲ್ಲಿ ಎಲೆ ಮರೆಯ ಕಾಯಿಯಂತೆ ಬದಕು ಸಾಗಿಸುತ್ತಿದ್ದು, ಅವರಿಗೀಗ 92 ವರ್ಷ ವಯಸ್ಸಾಗಿದೆ.