ಸೇನೆಯಲ್ಲಿ ಇಲ್ಲ ತಾರತಮ್ಯ... ಸೇನೆಯಲ್ಲಿ ಎದುರಾಗುವ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಚಿಂತೆ ಇತ್ತು. ಆದರೆ, ದೇಶಸೇವೆ ಮಾಡಬೇಕೆಂಬ ಬಗ್ಗೆ ಸ್ವಾತಿ ದೃಢನಿಶ್ಚಯ ಹೊಂದಿದ್ದಳು. ಅವಳ ಸಾಮರ್ಥ್ಯದ ಬಗ್ಗೆ ನಮಗೆ ಸದಾ ನಂಬಿಕೆ ಇತ್ತು. ನಾವು ಸಂಪೂರ್ಣ ಬೆಂಬಲ ನೀಡಲು ತೀರ್ಮಾನಿಸಿದೆವು. ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ, ಗೌರವಭಾವ ದೊರೆಯುತ್ತಿದೆ. ಅವರನ್ನು ಪುರುಷ ಅಧಿಕಾರಿಗಳಂತೆಯೇ ಸಮಾನವಾಗಿ ಕಾಣಲಾಗುತ್ತದೆ ಎನ್ನುವುದೇ ಅತ್ಯಂತ ಸಮಾಧಾನದ, ಸಾರ್ಥಕತೆಯ ಭಾವ ಮೂಡಿಸುತ್ತದೆ.